Jul 29, 2022, 9:34 PM IST
ದನ ಕಟ್ಟುವ ಜಾಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಭಯಾನಕ ಮಾರಾಮಾರಿ ನಡೆದಿದೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದನ ಕಟ್ಟುವ ವಿಚಾರಕ್ಕೆ ಆರಂಭವಾದ ಜಗಳ ಬೀದಿ ರಂಪವಾಗಿ ಮಾರ್ಪಟ್ಟಿದ್ದು, ಗಂಡಸರು ಹೆಂಗಸರು ಎನ್ನದೇ ಎಲ್ಲರೂ ಪರಸ್ಪರ ಕಲ್ಲು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಹಿಗ್ಗಾಮುಗ್ಗಾ ಹೊಡೆದಾಡಿದ ಪರಿಣಾಮ ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರಪ್ರದೇಶದ ಫಿಲಿಬಿತ್‌ನ ರಘುನಾಥ ಪುರದಲ್ಲಿ ಈ ಘಟನೆ ನಡೆದಿದೆ. ತಮ್ಮ ಮಾಲೀಕರು ಹೀಗೆ ಮುಖ ಮೂತಿ ನೋಡದೆ ಹೊಡೆದಾಡುತ್ತಿದ್ದರೆ, ಸುತ್ತಲಿರುವ ದನಗಳು ಇವರನ್ನೇ ನೋಡುತ್ತಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.