Vaccination: 100 ಕೋಟಿ ಡೋಸ್ ಲಸಿಕೆ, ವಿಶ್ವದಾಖಲೆ ಬರೆಯಲು ಭಾರತ ಸಜ್ಜು!

Oct 21, 2021, 8:59 AM IST

ನವದೆಹಲಿ(ಅ.21) ಕೋವಿಡ್‌ ಲಸಿಕೆ ನೀಡಿಕೆ ಆರಂಭವಾದ 9 ತಿಂಗಳಲ್ಲೇ 100 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲಿಗೆ ಭಾರತ ಹತ್ತಿರವಾಗಿದೆ. ಬುಧವಾರ ರಾತ್ರಿಯವರೆಗೆ 99.65 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ. ಗುರುವಾರ 100 ಕೋಟಿ ಡೋಸ್‌ ಮೈಲಿಗಲ್ಲಿ ದಟ್ಟವಾಗಿದೆ.

ಬುಧವಾರ ದೇಶಾದ್ಯಂತ 48 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಭಾರತದ ಲಸಿಕಾ ನೀಡಿಕೆ 100 ಕೋಟಿ ದಾಟುತ್ತಿದ್ದಂತೆ ಸಂಭ್ರಮಾಚರಣೆ ನಡೆಸಲು ಆಡಳಿತ ಪಕ್ಷ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕಾ ಕೇಂದ್ರವೊಂದಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.