Jan 26, 2021, 3:25 PM IST
ನವದೆಹಲಿ (ಜ. 26): ಕೇಂದ್ರ ಕೃಷಿಕಾಯ್ದೆ ವಿರೋಧಿಸಿ ರೈತರ ಹೋರಾಟ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕಳೆದ 60 ದಿನಗಳಿಂದ ರೈತರ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ದೆಹಲಿ, ಇಂದು ಟ್ರಾಕ್ಟರ್ ರ್ಯಾಲಿಗೆ ಸಾಕ್ಷಿಯಾಗಿದೆ. ಸತಾಯ ಗತಾಯ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಮಾಡಲು ಬೇರೆ ಬೇರೆ ರೀತಿಯಲ್ಲಿ ಪ್ರತಿಭಟಿಸುತ್ತಿರುವ ರೈತರು ಇಂದು ಟ್ರಾಕ್ಟರ್ ರ್ಯಾಲಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ರೈತರ ನಡುವೆ ವಾಗ್ವಾದ ನಡೆದು, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ಗಣತಂತ್ರದಂದು ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತನ ಕಿಚ್ಚು: ರೈತನ ಕೋಪಕ್ಕೆ ಪೊಲೀಸರು ತತ್ತರ!
ಇನ್ನು ರಾಜ್ಯ ರಾಜಧಾನಿ ಸ್ಥಿತಿ ತೀರಾ ಭಿನ್ನವಾಗಿಯೇನೂ ಇಲ್ಲ. ಇಲ್ಲಿಯೂ ರೈತರ ಪ್ರತಿಭಟನೆ ಜೋರಾಗಿಯೇ ಇದೆ. ಈ ಪ್ರತಿಭಟನೆ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಾ..? ಸರ್ಕಾರದ ಮುಂದಿನ ನಿಲುವಿನ ಸಾಧ್ಯಾಸಾಧ್ಯತೆಗಳೇನು..? ಇಲ್ಲಿದೆ ಒಂದು ವರದಿ..!