Apr 18, 2024, 11:06 PM IST
ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ಮೇಲೆ ಫಯಾಜ್ ಭೀಕರ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ತಾಯಿ-ಸ್ನೇಹಿತರ ಮುಂದೆ ಆರೋಪಿ ಫಯಾಜ್ 9 ಬಾರಿ ಚಾಕು ಇರಿದು ನೇಹಾಳನ್ನು ಹತ್ಯೆ ಮಾಡಿದ್ದಾನೆ.ನೇಹಾ ಹಾಗೂ ಫಯಾಜ್ ಒಂದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರ. ಹಲವು ದಿನಗಳಿಂದ ನೇಹಾಳ ಬೆನ್ನು ಬಿದ್ದಿದ್ದ. ಪ್ರೀತ್ಸೆ ಅಂತಾ ಹಿಂದೆ ಬಿದ್ದ ಕಾರಣ ನೇಹಾ ಕಾಲೇಜು ಕೂಡ ತೊರೆದಿದ್ದಳು. ಪರೀಕ್ಷೆ ಕಾರಣ ತಾಯಿ ಜೊತೆ ಕಾಲೇಜಿಗೆ ಆಗಮಿಸಿದ್ದಳು. ಮಾಸ್ಕ್ ಹಾಕಿಕೊಂಡು ಕಾಲೇಜಿಗೆ ಆಗಮಿಸಿದ ಆರೋಪಿ ಫಯಾಜ್, ಚಾಕುವಿನಿಂದ ನೇಹಾಳನ್ನು ಹತ್ಯೆ ಮಾಡಿದ್ದಾನೆ.