ರಾಮಮಂದಿರ ಉದ್ಘಾಟನೆ ವೇಳೆ ರೈಲಿನಲ್ಲಿ ಪ್ರಯಾಣಿಸಬೇಡಿ, ಮುಸ್ಲಿಮರು ಮನೆಯಲ್ಲೇ ಇರಿ: ಬದ್ರುದ್ದೀನ್ ಅಜ್ಮಲ್

Jan 8, 2024, 2:23 PM IST

ರಾಮಮಂದಿರ ಉದ್ಘಾಟನೆಗೆ ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಬದ್ರುದ್ದೀನ್ ಅಜ್ಮಲ್(Badruddin Ajmal) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮಮಂದಿರ(Ram Mandir) ಉದ್ಘಾಟನೆ ವೇಳೆ ರೈಲಿನಲ್ಲಿ ಪ್ರಯಾಣಿಸಬೇಡಿ. ಮುಸ್ಲಿಮರು ಮನೆಯಲ್ಲೇ ಇರಿ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಕರೆ ನೀಡಿದ್ದಾರೆ. ಜನವರಿ 20ರಿಂದ 26ರವರೆಗೆ ಮುಸ್ಲಿಮರು(Muslims) ಮನೆಯಲ್ಲೇ ಇರಿ. ರಾಮಮಂದಿರ ಉದ್ಘಾಟನೆ ವೇಳೆ ಕರಸೇವಕರ ಚಳವಳಿ ಇರುತ್ತೆ, ಸಾವಿರಾರು ಸ್ವಯಂಸೇವಕರು ರೈಲು, ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಒಂದೆರಡು ಮುಸ್ಲಿಮರು ಸಿಕ್ಕಿಹಾಕಿಕೊಂಡ್ರೆ ಸಮಸ್ಯೆ ಆಗಬಹುದು. ಬಾಬ್ರಿ ಮಸೀದಿ ಧ್ವಂಸದ(Babri Masjid Demolition) ನಂತ್ರ ಮತ್ತೆ ಘಟನೆ ಮರುಕಳಿಸಬಾರದು. ದೇಶದ ಶಾಂತಿಗಾಗಿ ಮುಸ್ಲಿಮರು ಪ್ರಯಾಣಿಸದಂತೆ ಸಂಸದ ಈ ರೀತಿ ಕರೆ ನೀಡಿದ್ದಾರಂತೆ. 

ಇದನ್ನೂ ವೀಕ್ಷಿಸಿ:  UI Teaser: 'ಯುಐ'ಪ್ರಪಂಚಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್ಸ್ ಎಂಟ್ರಿ..! ಟೀಸರ್ ರಿಲೀಸ್ ಮಾಡ್ತಾರೆ ಕನ್ನಡ ನಟರು.!