ಸುಖ್‌ಬೀರ್‌ ಸಿಂಗ್‌ ಬಾದಲ್‌ ಕೊಲೆ ಯತ್ನ; ಉಗ್ರ ನಾರಾಯಣ ಸಿಂಗ್‌ಗೆ ಖಲಿಸ್ತಾನಿ ಲಿಂಕ್​​?

Dec 5, 2024, 3:43 PM IST

ನವದೆಹಲಿ (ಡಿ.5): ಶಿರೋಮಣಿ ಅಖಾಲಿ ದಳ ನಾಯಕ (ಎಸ್‌ಎಡಿ) ಸುಖ್‌ಬೀರ್‌ ಸಿಂಗ್‌ ಬಾದಲ್‌ ಕೂದಲೆಳೆಯ ಅಂತರದಲ್ಲಿ ಕೊಲೆ ಯತ್ನದಿಂದ ಪಾರಾಗಿದ್ದಾರೆ. ಅಮೃತ್‌ಸರದ ಸ್ವರ್ಣ ಮಂದಿರದ ಎದುರಲ್ಲೇ ಸುಖ್‌ಬೀರ್‌ ಸಿಂಗ್‌ ಬಾದಲ್‌ ಕೊಲೆ ಯತ್ನ ನಡೆಸಲಾಗಿದ್ದು, ಉಗ್ರ ನಾರಾಯಣ್‌ ಸಿಂಗ್‌ಗೆ ಖಲಿಸ್ತಾನಿ ಲಿಂಕ್‌ ಇರುವ ಬಗ್ಗೆ ಚರ್ಚೆ ಆಗುತ್ತಿದೆ.

ಬಬ್ಬರ್​​ ಖಲ್ಸಾ ಇಂಟರ್​​ನ್ಯಾಷನಲ್​ ಸಂಘಟನೆ ಜೊತೆ ದಾಳಿಕೋರನಿಗೆ ನಂಟಿದೆ ಎನ್ನಲಾಗುತ್ತಿದೆ. ಬಬ್ಬರ್‌ ಖಲ್ಸಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಉಗ್ರ ಸಂಘಟನೆ. ಮಿಲಿಟರಿ ಕೇಸ್‌ನಲ್ಲಿ ನಾರಾಯಣ ಸಿಂಗ್ ಐದು ವರ್ಷಗಳ ಕಾಲ ಜೈಲಿನಲ್ಲಿದ್ದ ಎನ್ನಲಾಗುತ್ತಿದೆ.

Bengaluru: 2160 ಕೋಟಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪಾಲು ಖರೀದಿಸಿದ ಕೆನಡಾ ಕೋಟ್ಯಧಿಪತಿ!

ಇತ್ತೀಚೆಗೆ ಬೇಲ್‌ ಮೇಲೆ ಹೊರಬಂದಿದ್ದ ನಾರಾಯಣ್‌ ಸಿಂಗ್‌ ಮೇಲೆ ಹಲವು ಕುಖ್ಯಾತ ಪ್ರಕರಣಗಳಿವೆ. 1984ರಲ್ಲೇ ಪಾಕಿಸ್ತಾನಕ್ಕೂ ಹೋಗಿಬಂದಿದ್ದ ನಾರಾಯಣ ಸಿಂಗ್  ಡ್ರಗ್ಸ್​​​,  ಶಸ್ತ್ರಾಸ್ತ್ರ  ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದಾರೆ. ಪಾಕಿಸ್ತಾನದಿಂದ ಬಾಂಬ್​​, AK ರೈಫಲ್ಸ್​​, ಪಿಸ್ತೂಲ್​​ ಕಳ್ಳಸಾಗಣೆ ಮಾಡಿರುವ ಕೇಸ್‌ ಅವರ ಮೇಲಿದೆ. 1984, 86ರಲ್ಲಿ ಪಾಕಿಸ್ತಾನಕ್ಕೆ  ನಾರಾಯಣ್​​ ಚೌರಾ ಗಡೀಪಾರಾಗಿದ್ದ.