Dec 19, 2019, 6:18 PM IST
ಲಕ್ನೋ/ ಅಹಮದಾಬಾದ್(ಡಿ. 19) ಪೌರತ್ವ ಮಸೂದೆ ವಿರೋಧಿಸಿ ಅಹಮದಾಬಾದ್ ಮತ್ತು ಲಕ್ನೋದಲ್ಲಿಯೂ ವ್ಯಾಪಕ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ಬಸ್ ಗೆ ಬೆಂಕಿ ಇಟ್ಟಿದ್ದಾರೆ. ಹಾಗಾದರೆ ಸದ್ಯ ಪರಿಸ್ಥಿತಿ ಯಾವ ಹಂತದಲ್ಲಿದೆ ನೀವೇ ನೋಡಿಕೊಂಡು ಬನ್ನಿ...
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವ ಪೌರತ್ವ ತಿದ್ದುಪಡಿ ಮಸೂದೆ ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡು ಕಾನೂನು ಆಗಿದೆ. ಕೆಲವರು ಈ ಕಾಯಿದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಅದೆಲ್ಲದರ ನಡುವೆ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ.