ಅಸ್ಸಾಂನಲ್ಲಿ ಭೀಕರ ಪ್ರವಾಹ ; ಜನಜೀವನ ಅಸ್ತವ್ಯಸ್ತ

Jul 17, 2020, 11:44 AM IST

ದಿಸ್ಪುರ (ಜು. 17): ಅಸ್ಸಾಂಮಿನ 33 ಜಿಲ್ಲೆಗಳಲ್ಲಿ 26 ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. 3500 ಹಳ್ಳಿಗಳ ಕನಿಷ್ಠ 34 ಲಕ್ಷ ಜನ ಪ್ರವಾಹ ಹೊಡೆತ ಸಹಿಸಲಾಗದೇ ಕಂಗಾಲಾಗಿದ್ದಾರೆ. ಇದಿಷ್ಟು ಸಾಲದು ಅಂತ ಬ್ರಹ್ಮಪುತ್ರ ಸೇರಿದಂತೆ 8 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೀರಿನ ರಭಸ ನೋಡಿದ್ರೆ ಹೃದಯ ಬಡಿತವೇ ನಿಂತಂತೆ ಭಾಸವಾಗುತ್ತದೆ. 

1956 ರಲ್ಲಿ ಅಸ್ಸಾಂನಲ್ಲಿ ಒಂದು ಭೂಕಂಪ ಸಂಭವಿಸಿತು. ಅಂದಿನಿಂದ ಸಮುದ್ರ ಹಾಗೂ ಭೂಮಿಯ ನಡುವಿನ ಅಂತರ ಕಡಿಮೆಯಾಯ್ತು ಅಂತಾರೆ. ಅಂದಿನಿಂದ ಪ್ರತಿವರ್ಷವೂ ಇಂತಹ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಕಳೆದ ಒಂದು ತಿಂಗಳಿನಿಂದಲೂ ಅಸ್ಸಾಂ ಜಲವ್ಯೂಹದೊಳಗೆ ಸಿಲುಕಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಊರಿಗೆ ಊರೇ ಮುಳುಗಿ ಹೋಗುತ್ತಿದೆ. ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಭೀಕರ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ಚಿತ್ರಣ ಹೀಗಿದೆ ನೋಡಿ..!