ಪಂಜಾಬ್ ಗೆದ್ದ ಆಪ್ ಮುಂದಿನ ಟಾರ್ಗೆಟ್ ಕರ್ನಾಟಕ, ರಾಜಧಾನಿಯಿಂದಲೇ ಕೇಜ್ರಿ ರಣಕಹಳೆ!

Apr 22, 2022, 1:54 PM IST

ಬೆಂಗಳೂರು(ಏ.22) ‘ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್‌ನ 20 ಪಸೆಂಟ್‌ ಸರ್ಕಾರ ಇತ್ತು. ಈಗ ಬಿಜೆಪಿ ಆಡಳಿತದಿಂದ 40 ಪರ್ಸೆಂಟ್‌ ಭ್ರಷ್ಟಸರ್ಕಾರ ಬಂದಿದೆ. ನಿಮಗೆ ಗೂಂಡಾಗಳು, ಲಘಂಗರು, ಭ್ರಷ್ಟಾಚಾರಿಗಳು, ಅತ್ಯಾಚಾರಿಗಳ ಸರ್ಕಾರ ಬೇಕೆ ಅಥವಾ ಪ್ರಾಮಾಣಿಕ ಆಡಳಿತ ನೀಡುವ ಆಮ್‌ ಆದ್ಮಿ ಸರ್ಕಾರ ಬೇಕೆ? ನೀವೇ ನಿರ್ಧಾರ ಮಾಡಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕರೆ ನೀಡಿದ್ದಾರೆ.

‘ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಮಾಡಿರುವ ಅಭಿವೃದ್ಧಿ ಮ್ಯಾಜಿಕ್‌ ಕರ್ನಾಟಕಕ್ಕೆ ಬೇಡವೇ? ದೆಹಲಿ, ಪಂಜಾಬ್‌ನಲ್ಲಿ ಆಗಿದ್ದನ್ನು ಕರ್ನಾಟಕದಲ್ಲೂ ಮಾಡೋಣ. ಇಲ್ಲಿನ ರಾಜಕಾರಣವನ್ನು ಬದಲಿಸೋಣ’ ಎಂದು ಹೇಳಿದರು.

ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಲುಚ್ಚಾಗಳು, ಗೂಂಡಾಗಳು, ಭ್ರಷ್ಟಾಚಾರಿಗಳು, ಬಲತ್ಕಾರಿಗಳು ಬಿಜೆಪಿ ಸೇರುತ್ತಿದ್ದಾರೆ. ರಾಜ್ಯದಲ್ಲಿ 40 ಪರ್ಸೆಂಟ್‌ ಸರ್ಕಾರ ಅಧಿಕಾರದಲ್ಲಿದ್ದರೆ ದೆಹಲಿಯಲ್ಲಿ 0% ಸರ್ಕಾರ ಅಧಿಕಾರದಲ್ಲಿದೆ. ಭ್ರಷ್ಟಾಚಾರಕ್ಕೆ ಪರ್ಯಾಯ ಆಮ್‌ ಆದ್ಮಿ ಪಕ್ಷ. ಹೀಗಾಗಿ 40% ಸರ್ಕಾರವನ್ನು ಧಿಕ್ಕರಿಸಿ, ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.