ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್, ಗೋವಾದತ್ತ 45 ಲಕ್ಷಕ್ಕೂ ಅಧಿಕ ಮಂದಿ!

Dec 31, 2020, 3:36 PM IST

ಬೆಳಗಾವಿ(ಡಿ.31): ಬೆಳಗಾವಿ ಮೂಲಕ ಗೋವಾದತ್ತ ಪ್ರವಾಸಿಗರ ದಂಡೇ ಸಾಗಲಾರಂಭಿಸಿದೆ. ಖಾಸಗಿ ಬಸ್ ಹಾಗೂ ಕಾರುಗಳಲ್ಲಿ ಯುವಕರು ಗೋವಾದತ್ತ ತೆರಳುತ್ತಿದ್ದಾರೆ. ಇನ್ನು ಗೋವಾದಲ್ಲಿ 45 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಗೋವಾ ಸಿಎಂ ಸಾವಂತ್ ಖುದ್ದು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೌದು ಗೋವಾದ ಕಡಲ ತೀರದಲ್ಲಿ ಹೊಸ ವರ್ಷದ ಸಂಭ್ರಮ ರಂಗೇರಲಿದೆ. ಇತ್ತ ಬೆಂಗಳೂರು ಸಂಪೂರ್ಣ ಲಾಕ್ ಆಗಿ, ರಾಜ್ಯದಲ್ಲಿ ಹೊಸ ವರ್ಷ ಸಂಭ್ರಮಕ್ಕರೆ ಬ್ರೇಕ್ ಬಿದ್ದಿದೆ. ಹೀಗಾಗಿ ಆಚರಣೆಗೆ ಜನರು ಗೋವಾದತ್ತ ಮುಖ ಮಾಡಿದ್ದಾರೆ