Mar 17, 2022, 6:42 PM IST
ಕಾಲ ಮೇಲೆ ಕಾಲು ಹಾಕಿ ಹೀಗೆ ವಿರಾಜಮಾನವಾಗಿರೋರು ಅಪ್ಪನೆರವಂಡ ಅಪ್ಪಣ್ಣ... ಇವರ ವಯುಸ್ಸು ಇಂದಿಗೆ ಭರ್ತಿ 100 ವರ್ಷ. 1922 ರ ಮಾರ್ಚ್ 13 ರಂದು ಜನಿಸಿದ ಇವರು ಇಂದು ತಮ್ಮ ಜನ್ಮದಿನದ ಶತಮಾನೋತ್ಸವವನ್ನ ಆಚರಿಸಿಕೊಂಡಿದ್ದಾರೆ. ಇವರ ಮಕ್ಕಳು ಮೊಮ್ಮಕ್ಕಳು, ಕುಟುಂಸಬ್ಥರು ಎಲ್ಲರೂ ಸೇರಿ ಏನಿಲ್ಲವೆಂದರೂ 80 ಮಂದಿ ಕುಟುಂಬ ಸದಸ್ಯರು ಆಗಮಿಸಿ ಹ್ಯಾಪಿ ಬರ್ತ್ಡೆ ಅಂತ ವಿಶ್ ಮಾಡಿ ಆಶೀರ್ವಾದ ಪಡೆದಿದ್ದಾರೆ. ಮಡಿಕೇರಿಯ ಹೊಸ ಬಡಾವಣೆ ನಿವಾಸಿಯಾಗಿರೋ ಶತಾಯುಶಿ ಅಪ್ಪಣ್ಣ ಸೇನೆಗೆ ಸೇರಿ ಎರಡನೇ ಮಹಾಯುದ್ಧದಲ್ಲೂ ಭಾಗವಹಿಸಿದ ಧೀರ. ಸೇನೆಯಿಂದ ನಿವೃತ್ತಿಯಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಯಾಗಿ ನಿವೃತ್ತರಾದವರು. ನಿವೃತ್ತಿಯ ಬಳಿಕವೂ ಇವರು ಸದಾ ಕ್ರಿಯಾ ಶೀಲ. ದಿನಕ್ಕೆ 6 ಕಿಲೋ ಮೀಟರ್ ವಾಕ್ ಮಾಡ್ತಾರೆ ಶತಾಯುಶಿ ಹೌದು ಈ ಶತಾಯುಶಿಯ ಆರೋಗ್ಯದ ಗುಟ್ಟು ಕೇಳಿದ್ರೆ ನಿಮಗೆ ಆಶ್ಚರ್ಯವಾಗಬಹುದು. ಇವರು ಪ್ರತಿದಿನ ಕನಿಷ್ಟ ಆರು ಕಿಲೋ ಮೀಟರ್ ವಾಕ್ ಮಾಡ್ತಾರಂತೆ. ಕೊರೋನಾ ಟೈಮಲ್ಲಿ ಗೇಟ್ ಬೀಗ ಹಾಕಿದ್ರೂ ಕಾಂಪೌಂಡ್ ದಾಟಿ ವಾಕ್ ಮಾಡಿ ಬರುತ್ತಿದ್ದರಂತೆ. ಮಿತವಾದ ಆಹಾರ, ಶಿಸ್ತಿನ ಬದುಕೇ ಇವರ ಆರೋಗ್ಯ ಗುಟ್ಟು ಅಂತಾರೆ ಕುಟುಂಬ ಸದಸ್ಯರು. 100 ವರ್ಷವಾದ್ರೂ ಇಂದಿಗೂ ಅಪ್ಪಣ್ಣ ಅವರು ಫಿಟ್ ಆಂಡ್ ಫೈನ್. ಇಂದಿಗೂ ಯಾರನ್ನೂ ಡಿಪೆಂಡ್ ಆಗಿಲ್ಲ.
ಬರುತ್ತಿದೆ ಹೊಸ Corona ಅಲೆ! Stealth Omicron ಲಕ್ಷಣಗಳೇನು ಗೊತ್ತಾ?
ಅಪ್ಪನೆರವಂಡ ಅಪ್ಪಣ್ಣ, ಶತಾಯುಶಿ
ಇನ್ನು ಶತಾಯುಶಿ ತಾತನ ಹುಟ್ಟು ಹಬ್ಬ ಸೆಲಬ್ರೇಟ್ ಮಾಡೋಕೆ ಅಂತ ಇವರ ಎಲ್ಲಾ ಕುಟುಂಬಸ್ಥರು ಬಹಳ ಖುಷಿ ಖುಷಿಯಿಂದ ಪಾಲ್ಗೊಂಡಿದ್ದರು. ತಾತನ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಇಂತಹ ಬದುಕು ತಮಗೂ ಸಿಗಲೀ ಅಂತ ಆಶೀರ್ವಾದ ಬೇಡಿದ್ರು. ತಾತ ಇಂದೂ ಕುಡ ಆರೋಗ್ಯವಂತಾಗಿರಲು ಅವರ ಶಿಸ್ತು ಬದ್ಧ ಬದುಕು ಮತ್ತು ಫಿಟ್ನೆಸ್ ಕಾಳಜಿಯೇ ಕಾರಣ ಎಂದ್ರು.
Coffee addiction ಆರೋಗ್ಯಕ್ಕೆ ಒಳ್ಳೇದೋ, ಕೆಟ್ಟದ್ದೋ?
ಕಾವೇರಿ ಚಿಣ್ಣಪ್ಪ, ಮಗಳು
ಅಪ್ಪಣ್ಣ ತಾತಾ ಎಂದ್ರೆ ಮಡಿಕೇರಿ ನಗರದವರಿಗೆಲ್ಲಾ ಪರಿಚಿತರು. ಎಲ್ಲೇ ಕಂಡರೂ ಜನರೆಲ್ಲರೂ ತಾತಾ ಚೆನ್ನಾಗಿದ್ದೀರಾ ಅಂತ ಮಾತನಾಡಿಸಿಯೇ ಮುಂದೆ ಹೋಗ್ತಾರೆ. ಎರಡು ಶತಮಾನಗಳ ಮಧ್ಯೆ ಮಹಾ ಕೊಂಡಿಯಂತಿರೋ ಈ ಶತಾಯುಶಿ ಇನ್ನೂ ನೂರು ಕಾಲ ಬಾಳಲಿ ಅಂತ ಎಲ್ಲರೂ ಹಾರೈಸಿದ್ದಾರೆ.