Mar 2, 2020, 8:37 PM IST
ಗದಗ(ಮಾ.02): ಅಪರೂಪದ ಕುಕ್ರಿ ಜಾತಿ ಹಾವು ಗದಗದಲ್ಲಿ ಪತ್ತೆಯಾಗಿದೆ. ನರಗುಂದ ಪಟ್ಟಣದ ರಾಘವೇಂದ್ರ ಅನೇಗುಂದಿಯವರ ಅಡುಗೆ ಮನೆಯಲ್ಲಿ ದಿಢೀರ್ ಹಾವು ಕಾಣಿಸಿಕೊಂಡಿದೆ. ಹಾವು ಕಂಡು ಭಯಭೀತರಾದ ಕುಟುಂಬಸ್ಥರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಉರಗ ತಜ್ಞರಾದ ಬಡ್ನೇಸಾಬ್ ಸುರೇಬಾನ್ ಹಾಗೂ ಬಸವರಾಜ್ ಕೆರೂರು ತಕ್ಷಣ ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿ, ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಅಪರೂಪ ಕುಕ್ರಿ ಜಾತಿ ಹಾವಿನ ವಿಡಿಯೋ ಇಲ್ಲಿದೆ.