ಮಾಂಸ ತಿನ್ನುವವರೆಲ್ಲಾ ಸಸ್ಯಹಾರಿಗಳಾದ್ರೆ ಹೇಗಿರುತ್ತೆ? ಏನಾಗುತ್ತೆ?

Aug 11, 2022, 12:59 PM IST

ಪ್ರಪಂಚದಲ್ಲಿ ಹಲವು ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಕೆಲವು ಸಂಗತಿಗಳಂತೂ ನಂಬಲ ಸಾಧ್ಯವಾಗುತ್ತದೆ. ಹೀಗಾಗಲೂ ಕಾರಣ ಏನಿರಬಹುದು ಎಂದು ಜನರನ್ನು ಚಿಂತಿಸುವಂತೆ ಮಾಡುತ್ತದೆ. ಈ ಮಧ್ಯೆ ಪ್ರಪಂಚದಲ್ಲಿರುವ ಮಾಂಸಹಾರಿಗಳೆಲ್ಲ ಸಸ್ಯಹಾರಿಗಳಾದರೆ ಏನಾಗುತ್ತದೆ ಎಂಬ ಪ್ರಶ್ನೆಯೊಂದು ಹಾಗೂ ಅಧ್ಯಯನವೊಂದು ನಡೆದಿದ್ದು, ಒಂದು ವೇಳೆ ಪ್ರಪಂಚದಲ್ಲಿರುವ ಮನುಷ್ಯರೆಲ್ಲರೂ ಮಾಂಸ ಬಿಟ್ಟು ಸಸ್ಯಹಾರ ಸೇವಿಸಲು ಪ್ರಾರಂಭಿಸಿದರೆ ಏನಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಮೀನು ಚಿಕನ್ ಮಟನ್ ಹೆಸರು ಕೇಳಿದರೆ ಮಾಂಸಹಾರಿಗಳ ಬಾಯಲ್ಲಿ ನೀರೂರುತ್ತದೆ. ಪ್ರಪಂಚದಲ್ಲಿ ಮಾಂಸಹಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಾಂಸಹಾರಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಪ್ರಾಣಿಗಳ ಮಾರಣಹೋಮ ಹೆಚ್ಚಾಗುತ್ತದೆ. ಆದರೆ ಅಮೆರಿಕಾದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಮಾಂಸಾಹಾರ ಕಾರಣ ಎಂಬ ಅಪ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ  ಅಮೆರಿಕಾದ ಶೇ.60 ರಷ್ಟು ಜನ ಸಸ್ಯಾಹಾರಿಗಳಾಗಿದ್ದಾರಂತೆ. ಹಾಗಾದರೆ ಸಸ್ಯಾಹಾರವನ್ನೇ ತಿಂದರೆ ಸಮಸ್ಯೆ ಪರಿಹಾರವಾಗುತ್ತದ. ಇಲ್ಲ ಅಸಲಿ ಸಮಸ್ಯೆ ಶುರುವಾಗೋದು ಇಲ್ಲಿಂದ. ಮಾಂಸಹಾರ ಬಿಡುವುದರಿಂದ ಎಲ್ಲಾ ಸಮಸ್ಯೆಗೆ ಮುಕ್ತಿ ಸಿಗಲ್ಲ. ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪರಿಸರ ಗಬ್ಬು ನಾರಲು ಶುರುವಾಗುತ್ತದೆ. ಇನ್ನು ಏನೆಲ್ಲಾ ಸಮಸ್ಯೆಯಾಗುತ್ತದೆ ಎಂಬುದರ ಸಂಪೂರ್ಣ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.