Aug 11, 2022, 12:29 PM IST
ಬಾಗಲಕೋಟೆಯ ನಗರದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಕಲಿಕಾ ಆಹಾರ ಮಾರಾಟ ಮೇಳವೊಂದನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ 21 ಸ್ಟಾಲ್ಗಳನ್ನ ಹಾಕಲಾಗಿತ್ತು, ಈ ಮಧ್ಯೆ 100ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ರಲ್ಲಿ ಭಾಗವಹಿಸಿದ್ರು. ಇದು ಕೇವಲ ಮಾರಾಟ ಮೇಳವಾಗಿರದೇ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನ ಬಿಂಬಿಸುವ ಕಾರ್ಯಕ್ರಮವಾಗಿತ್ತು. ಯಾಕಂದ್ರೆ ಈ ಕಲಿಕಾ ಮಾರಾಟ ಮೇಳದಲ್ಲಿ ವಿದ್ಯಾರ್ಥಿನಿಯರು ದೇಶದ ವಿವಿಧ ರಾಜ್ಯಗಳ (States) ತಿಂಡಿ ತಿನಿಸು ಮಾಡುವುದರ ಜೊತೆಗೆ ಆಯಾ ರಾಜ್ಯಗಳ ಸಂಸ್ಕೃತಿಯನ್ನ ಬಿಂಬಿಸುವ ವೇಷಭೂಷಣ ತೊಟ್ಟು ಗಮನ ಸೆಳೆದಿದ್ದರು.
Kichten Hacks: ಅಡುಗೆಗೆ ಖಾರ, ಉಪ್ಪು ಹೆಚ್ಚಾದ್ರೆ ಹೀಗ್ಮಾಡಿ
ಕಲಿಕಾ ಆಹಾರ ಮಾರಾಟ ಮೇಳ (Food festival)ದಲ್ಲಿ ನಮ್ಮ ಕರ್ನಾಟಕ ಸೇರಿದಂತೆ ದೇಶದ ಮಹಾರಾಷ್ಟ್ರ, ಪಂಜಾಬ, ಆಂಧ್ರ, ಬಿಹಾರ, ಕೇರಳ, ಹರಿಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ವೇಷಭೂಷಣವನ್ನ ಹೊತ್ತು ವಿದ್ಯಾರ್ಥಿಗಳು (Students) ವಿವಿಧ ಖಾದ್ಯಗಳ ತಯಾರಿಕೆ ಮತ್ತು ಮಾರಾಟದಲ್ಲಿ ಬಿಝಿಯಾಗಿದ್ದರು. ಇನ್ನು ಇದಕ್ಕಾಗಿ ಉಪನ್ಯಾಸಕರು ವಿದ್ಯಾರ್ಥಿಗಳನ್ನ ಪ್ರೇರೇಪಿಸಿದ್ರು. ಆಹಾರ ಮೇಳಕ್ಕೆ ಬಂದ ಸಾರ್ವಜನಿಕರಲ್ಲಿ ವಿವಿಧ ಬಗೆಯ ಖಾದ್ಯಗಳನ್ನ ನೋಡಿ ಬಾಯಲ್ಲಿ ನೀರೂರಿಸುವಂತಾಗಿತ್ತು. ಇವುಗಳ ಮಧ್ಯೆ ಬಂದವರು ವಿದ್ಯಾರ್ಥಿಗಳಿಗೆ ಹಣ ನೀಡಿ ಖಾದ್ಯವನ್ನ ಖರೀದಿಸಿ ತಿನ್ನಲು ಮುಂದಾದ್ರು.
ಮಂಗಳೂರು ಸ್ಟೈಲ್ ಚಿಕನ್ ಗೀ ರೋಸ್ಟ್ ರೆಸಿಪಿ ಮಾಡೋದು ತುಂಬಾ ಈಝಿ
ಡಿಫರೆಂಟ್ ಫುಡ್ ಫೆಸ್ಟಿವಲ್‌ನಿಂದ ಅತ್ತ ಬಂದ ಸಾರ್ವಜನಿಕರಿಗೆ ದೇಶದ ವಿವಿಧ ಖಾದ್ಯಗಳನ್ನ ಒಂದೇ ಕಡೆಗೆ ತಿಂದೆವು ಅನ್ನೋ ಸಂತೃಪ್ತಿ ಇದ್ದರೆ, ಇತ್ತ ವಿದ್ಯಾರ್ಥಿನಿಯರಿಗೆ ಖಾದ್ಯ ತಯಾರಿಸಿ, ಮಾರಾಟ ಮಾಡಿ ಕಲಿಕೆಯಲ್ಲಿ ಯಶಸ್ವಿ ಕಂಡೆವು ಅನ್ನೋ ಭಾವ ನೆಮ್ಮದಿ ತಂದಿತ್ತು.