Good Cop: ಬೀದಿನಾಯಿಗಳ ಪಾಲಿನ ಅನ್ನಬ್ರಹ್ಮ ಈ ಎಸ್ಸೈ ಬಸವರಾಜು

Feb 16, 2022, 10:46 AM IST

ಇತ್ತೀಚೆಗಷ್ಟೇ ಮಲಗಿದ್ದ ಶ್ವಾನದ ಮೇಲೆ ಬೇಕೆಂದೇ ಕಾರು ಹತ್ತಿಸಿದ ಶ್ರೀಮಂತನ ದರ್ಪ ನೋಡಿದ್ದೀವಿ. ಅದಕ್ಕೆ ತದ್ವಿರುದ್ಧವಾದ ಮಾನವೀಯತೆಯ ಮುಖ ತೋರಿಸಿದ್ದಾರೆ ಬೆಂಗಳೂರಿನ ಅಶೋಕನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಸವರಾಜು. ಇವರು ಪ್ರತಿ ದಿನ 800ಕ್ಕೂ ಹೆಚ್ಚಿನ ನಾಯಿಗಳಿಗೆ ಪ್ರತಿದಿನ ಸ್ವಂತ ಖರ್ಚಿನಲ್ಲಿ ಆಹಾರ ನೀಡ್ತಾರೆ ಅಂದ್ರೆ ಅದೇನು ಸಾಮಾನ್ಯ ವಿಷಯವಲ್ಲ. 

ಲಾಕ್‌ಡೌನ್ ಸಂದರ್ಭದಲ್ಲಿ ಶುರುವಾದ ಈ ಕಾಯಕ ನಿರಂತರವಾಗಿ ಮುಂದುವರಿದು ಬಂದಿದೆ. ಬನಶಂಕರಿ, ಅಶೋಕನಗರ ಸುತ್ತಮುತ್ತದ ಬೀದಿನಾಯಿಗಳ ಪಾಲಿಗೆ ಅನ್ನದಾತರಾಗಿರುವ ಎಸ್ಸೈ ಬಸವರಾಜು ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. 

Sleep Better: ಹೊಸ ತಾಯಂದಿರೇ, ನಿದ್ರಾಹೀನತೆಯ ಸಮಸ್ಯೆಯೇ ? ಹೀಗೆ ಮಾಡಿ

ಪೋಲೀಸರೆಂದರೆ ಹಣ ಸುಲಿಯುವವರು, ಮಾನವೀಯತೆ ಇಲ್ಲದವರು ಎಂಬ ನಂಬಿಕೆ ಬೆಳೆದು ಬಂದಿರುವ ಈ ದಿನಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ನಾಯಿಗಳ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿರುವ ಬಸವರಾಜ್ ಕಾಯಕ ನಿಜಕ್ಕೂ ಪೊಲೀಸರಲ್ಲಿಯೂ ಮಾನವೀಯತೆ ಇದೆ, ಸ್ವಲ್ಪ ಹೆಚ್ಚೇ ಇದೆ ಎಂಬ ಭರವಸೆ ತುಂಬುವಂತಿದೆ.