ಕಾಣೆಯಾಗಿದ್ದ ಅಮ್ಮನಿಗೆ ತಿಥಿ ಮಾಡಿದ ಮಕ್ಕಳು, 25 ವರ್ಷಗಳ ನಂತರ ಸಿಕ್ಕ ತಾಯಿ

Dec 26, 2024, 5:10 PM IST

ಇದು ಅಪರೂಪದ ಕರುಳಿನ ಕೂಗಿನ ಕತೆ. ತಾಯಿ ಮಕ್ಕಳ ಸಂಬಂಧದ ಮನಕಲಕುವ ಕತೆ. ಆ ತಾಯಿ 25 ವರ್ಷಗಳ ಹಿಂದೆ ಮನೆ-ಮಠ.. ಮಕ್ಕಳು ಸಂಸಾರ ಎಲ್ಲವನ್ನು ತೊರೆದು ಟ್ರೈನ್ ಹತ್ತಿ ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಕಳೆದು ಹೋದ ತಾಯಿಯನ್ನು ಹುಡುಕಿ ಸುಸ್ತಾಗಿದ್ದ ಮಕ್ಕಳು, ಇನ್ನಿಲ್ಲವೆಂದು ತಿಥಿ ಕಾರ್ಯ ಮಾಡಿದ್ದರು. ಮನೆಯಲ್ಲಿ ಪೋಟೋ ಇಟ್ಟು ಪೂಜೆ ಮಾಡಿದ್ದರು. ಆದ್ರೆ, ವಿಧಿಯಾಟ ಹೇಗಿರುತ್ತೆ ನೋಡಿ. ಐಪಿಎಸ್ ಅಧಿಕಾರಿ ದೇವರಂತೆ ಬರ್ತಾರೆ. 25 ವರ್ಷಗಳ ನಂತರ ತಾಯಿ ಮಕ್ಕಳು ಮತ್ತೆ ಒಂದಾಗಿದ್ದಾರೆ.