Jan 16, 2024, 3:51 PM IST
ಇದೇ ತಿಂಗಳ 22ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಇದು ಕೇವಲ ಮಂದಿರ ಉದ್ಘಾಟನೆ ಅಲ್ಲ. ಇದು ದೇಶದ ಹಬ್ಬವಾಗಿದೆ. ಈ ದೇಶದ ಹಬ್ಬಕ್ಕೆ ಕೆಲ ದಿನಗಳ ಹಿಂದೆ ಅನೇಕ ವಿರೋಧಗಳು ಕೇಳಿ ಬಂದಿದ್ದವು. ಶೃಂಗೇರಿ ಮಠದಿಂದ ಎಲ್ಲದಕ್ಕು ಸ್ಪಷ್ಟನೆ ಸಿಕ್ಕಿದೆ. ಪುರಿ ಶ್ರೀಗಳ ಯಾವುದೇ ಹೇಳಿಕೆಗೂ ಶೃಂಗೇರಿ ಪೀಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಮ ಮಂದಿರ ಕುರಿತು ಪುರಿ ಶಂಕರಾಚಾರ್ಯ ಶ್ರೀಗಳಿಂದ ಹುಟ್ಟಿಕೊಂಡಿದ್ದ ವಿರೋಧಕ್ಕೆ ಶೃಂಗೇರಿ ಶ್ರೀ ಮಠದಿಂದ ಸಿಕ್ಕ ಉತ್ತರ.