Jan 10, 2021, 3:47 PM IST
ಮಕ್ಕಳನ್ನು ಸಾಯಿಸಲು ಕಂಸ ಪೂತನಿ ಎನ್ನುವ ರಾಕ್ಷಸಿಯನ್ನು ನೇಮಕ ಮಾಡುತ್ತಾನೆ. ಅವಳು ಊರೂರು ಸುತ್ತಿ ಮಕ್ಕಳನ್ನು ಸಂಹರಿಸುತ್ತಿರುತ್ತಾಳೆ. ಒಂದು ದಿನ ಸುಂದರಿ ರೂಪವನ್ನು ತಾಳಿ ಗೋಕುಲದತ್ತ ಬರುತ್ತಾಳೆ. ಗೋಕುಲದಲ್ಲಿರುವ ಗೋಪಿಕೆಯರು, ಆಕೆಯನ್ನು ನೋಡಿ ಅಚ್ಚರಿ ಪಡುತ್ತಾರೆ.
ಗೋಕುಲದ ಬೀದಿ ಬೀದಿಗಳಲ್ಲಿ ಸುತ್ತುತ್ತಾಳೆ. ಮಗುವಿದೆಯಾ ಅಂತ ಹುಡುಕುತ್ತಾಳೆ. ಹಾಗೆ ನೋಡುತ್ತಾ ನಂದನ ಮನೆಗೆ ಬರುತ್ತಾಳೆ. ಅಲ್ಲಿ ಮಗುವನ್ನು ನೋಡುತ್ತಾಳೆ. ಆ ಮಗುವಿನ ಮುಖದಲ್ಲಿ ಯಾವ ಕಳೆಯೂ ಇರುವುದಿಲ್ಲ. ಮಗುವನ್ನು ಎತ್ತಿ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾಳೆ. ವಿಷಪೂರಿತ ಹಾಲು ಕುಡಿಸಲು ಮುಂದಾಗುತ್ತಾಳೆ. ಕೂಡಲೇ ಕೃಷ್ಣ ಆಕೆಯಲ್ಲಿದ್ದ ಹಾಲನ್ನು ಹೀರುತ್ತಾನೆ. ಕೃಷ್ಣನ ಮುಷ್ಟಿಯಿಂದ ತಪ್ಪಿಸಿಕೊಳ್ಳಲಾಗದೇ ಪೂತನಿ ಸಾವನ್ನಪ್ಪುತ್ತಾಳೆ.