May 20, 2021, 2:47 PM IST
ಒಮ್ಮೆ ದೇವತೆಗಳೆಲ್ಲರೂ ತಾಯಿ ಆದಿಶಕ್ತಿಯನ್ನು ಪ್ರಾರ್ಥಿಸುತ್ತಾರೆ. 'ಅಮ್ಮಾ, ಶುಂಭ- ನಿಶುಂಭರು ರಕ್ತ ಬೀಜಾಸುರನ ಜೊತೆ ಸೇರಿ ನಮ್ಮ ರಾಜ್ಯವನ್ನು ಕಿತ್ತುಕೊಂಡಿದ್ದಾರೆ. ನಮಗೆ ಬಾಧೆ ಕೊಡುತ್ತಿದ್ದಾರೆ. ನಮ್ಮನ್ನು ರಕ್ಷಿಸು ತಾಯಿ' ಎಂದು ಬೇಡುತ್ತಾರೆ. ಆ ರಕ್ಕಸರನ್ನು ವಧಿಸುವುದಾಗಿ ಆದಿಶಕ್ತಿ ಅಭಯ ನೀಡುತ್ತಾಳೆ. ಸುಂದರವಾದ ಸ್ತ್ರೀ ರೂಪ ಧರಿಸಿ, ರಕ್ಕಸರಿರುವಲ್ಲಿ ಬರುತ್ತಾಳೆ. ಸುಂದರಿಯನ್ನು ನೋಡಿ ಅವರು ಮೋಹಿತರಾಗುತ್ತಾರೆ. 'ನನ್ನೊಂದಿಗೆ ಯುದ್ಧ ಮಾಡಿ ಗೆದ್ದರೆ ನಿಮ್ಮೊಂದಿಗೆ ಮದುವೆಯಾಗುವುದಾಗಿ ಷರತ್ತು ಹಾಕುತ್ತಾರೆ.