Aug 5, 2021, 12:09 PM IST
ಗುರುಪತ್ನಿಯ ಆಜ್ಞೆಯಂತೆ ಉತ್ತಂಗ ಪವಿಷ್ಯ ರಾಜನ ಹೆಂಡತಿಯ ಕರ್ಣಾಭರಣಗಳನ್ನು ತೆಗೆದುಕೊಂಡು ಬರುತ್ತಾನೆ. ಹೀಗೆ ದಾರಿಯಲ್ಲಿ ಬರುವಾಗ ದಿಗಂಬರನಾದ ಭಿಕ್ಷುಕನೊಬ್ಬ ಉತ್ತಂಗನನ್ನು ಹಿಂಬಾಲಿಸುತ್ತಾನೆ. ಹೀಗೆ ಬರುತ್ತಿರುವಾಗ ಅಲ್ಲೊಂದು ಸರೋವರ ಕಾಣಿಸುತ್ತದೆ. ನೀರು ಕುಡಿಯಲು ಉತ್ತಂಗ ಆಭರಣಗಳನ್ನು ನೆಲಕ್ಕಿಟ್ಟು ಸರೋವರಕ್ಕಿಳಿಯುತ್ತಾನೆ. ಆಗ ಭಿಕ್ಷುಕ ರೂಪದಲ್ಲಿದ್ದ ತಕ್ಷಕ ಆಭರಣಗಳನ್ನು ಕೊಂಡೊಯ್ಯುತ್ತಾನೆ. ಆಭರಣಗಳನ್ನು ತರಲು ಉತ್ತಂಗ ನಾಗಲೋಕಕ್ಕೆ ತೆರಳುತ್ತಾನೆ.