Aug 5, 2021, 11:43 AM IST
ಜನಮೇಜೇಯ ತಾನು ಮಾಡಬೇಕಾದ ಯಜ್ಞ ನಿರ್ವಹಣೆಗಾಗಿ ಆಶ್ರಮ ಬಿಟ್ಟು ಹೋಗಬೇಕಾದ ಸಂದರ್ಭ ಬಂತು. ಶಿಷ್ಯನಾದ ಉತ್ತಂಗನಿಗೆ ಗೃಹ ಕೆಲಸವನ್ನು ನಿಭಾಯಿಸುವಂತೆ ಹೇಳಿ ಹೊರಟು ಹೋಗುತ್ತಾರೆ. ಕೆಲವು ದಿನ ಕಳೆಯುತ್ತವೆ.
ಉತ್ತಂಗ ಉತ್ತಮವಾಗಿ ಗೃಹಕೃತ್ಯಗಳನ್ನು ನಿಭಾಯಿಸುತ್ತಾನೆ. ಗುರುವಿನ ಪರೀಕ್ಷೆಯನ್ನು ಗೆಲ್ಲುತ್ತಾನೆ. ಉತ್ತಂಗನಿಗೆ ಗುರುಗಳು ಅನುಗ್ರಹಿಸುತ್ತಾರೆ. ಗುರುದಕ್ಷಿಣೆಯಾಗಿ ಏನನ್ನು ಕೊಡಲಿ ಎಂದು ಕೇಳಿದಾಗ, ಗುರುಪತ್ನಿ ಹೀಗೆ ಹೇಳುತ್ತಾರೆ. ಪವಿಷ್ಯ ರಾಜನ ಹೆಂಡತಿಯ ಕರ್ಣಾಭರಣಗಳನ್ನು ನಾನು ಧರಿಸಬೇಕು ಎಂಬ ಆಸೆ ಇದೆ. ಅವಳನ್ನು ಯಾಚಿಸಿ ನನಗದನ್ನು ತಂದು ಕೊಡು ಎನ್ನುತ್ತಾರೆ. ಹಾಗೆ ಆಗಲಿ ಎಂದು ಉತ್ತಂಗ ಹೊರಡುತ್ತಾನೆ.