Sep 6, 2021, 1:24 PM IST
ನಾರದ ಮುನಿ, ಶ್ರೀ ಮಹಾಲಕ್ಷ್ಮೀ ದೇವಿ ಚರಿತ್ರೆಯನ್ನು ಹೇಳುವಂತೆ ನಾರಾಯಣ ಮಹರ್ಷಿಗಳಲ್ಲಿ ಪ್ರಾರ್ಥಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ. ಸೃಷ್ಟಿಗೆ ಪೂರ್ವದಲ್ಲಿ ರಾಸ ಮಂಡಲದಲ್ಲಿ ಶ್ರೀಕೃಷ್ಣ ಪರಬ್ರಹ್ಮದ ಎಡಭಾಗದಲ್ಲಿ 12 ವರ್ಷದ ಕುಮಾರಿಯಾಗಿ ಮಹಾಲಕ್ಷ್ಮೀ ಅವತರಿಸುತ್ತಾಳೆ. ಈ ತಾಯಿ ಚರಾಚರಗಳಲ್ಲೂ ನೆಲೆಸಿದ್ದಾಳೆ. ಚೈತ್ರ, ಭಾದ್ರಪದ, ಪುಷ್ಯ ಮಾಸಗಳ ಮಂಗಳವಾರ ಲಕ್ಷ್ಮೀಯನ್ನು ಪೂಜಿಸಬೇಕು.