Jan 9, 2021, 2:48 PM IST
ಶ್ರಾದ್ಧವನ್ನು ಎಷ್ಟು ಚೆನ್ನಾಗಿ ಮಾಡಬೇಕೆಂದು ಇಕ್ವ್ಷಾಶುವಿನಿಂದ ತಿಳಿದುಕೊಳ್ಳಬೇಕು. ಒಮ್ಮೆ ಒಬ್ಬರ ಮನೆಯಲ್ಲಿ ಶ್ರಾದ್ಧ ನಡೆಯುತ್ತಿತ್ತಂತೆ. ಎಷ್ಟು ಬಡಿಸಿದರೂ ಬ್ರಾಹ್ಮಣರು ಊಟ ಮಾಡುತ್ತಲೇ ಇದ್ದರಂತೆ. ಯಜಮಾನನಿಗೆ ಕೋಪ ಬಂದು, ಅಡುಗೆ ಮನೆಗೆ ಹೋಗಿ ಪಾತ್ರೆಯನ್ನು ತಂದು ಬ್ರಾಹ್ಮಣರ ಮುಂದಿಡುತ್ತಾನೆ. ನೀನಿಲ್ಲೆ ಭಸ್ಮವಾಗು ಅಂತ ಬ್ರಾಹ್ಮಣನ ಮೇಲೆ ಹಾಕುತ್ತಾನೆ. ಬ್ರಾಹ್ಮಣ ಆ ನೀರನ್ನು ಅಲ್ಲೇ ತಡೆಯುತ್ತಾನೆ. ಆಗ ಯಜಮಾನ ಭಯಪಟ್ಟು ಅವರಿಗೆ ಕೈ ಮುಗಿದು ಕ್ಷಮೆ ಕೇಳುತ್ತಾನೆ. ಮುಂದೆ ಆ ಬ್ರಾಹ್ಮಣ ಆಪಸ್ತಂಭ ಎಂದು ಹೆಸರು ಪಡೆಯುತ್ತಾನೆ. ಆಪಸ್ತಂಭ ಸ್ತೋತ್ರದಲ್ಲಿ ಶ್ರಾದ್ಧದ ವಿಧಿ ವಿಧಾನಗಳನ್ನು ವಿವರವಾಗಿ ಹೇಳಿದ್ದಾರೆ.