Mar 8, 2024, 10:00 AM IST
ರುದ್ರಾಕ್ಷಿಯನ್ನು ಶಿವನ ಕಣ್ಣು ಎಂದು ಪೂಜಿಸಲಾಗುತ್ತದೆ. ರುದ್ರನಾದ ಶಿವನ ಅನುಗ್ರಹವನ್ನು ನಮಗೆ ಒದಗಲು ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. ರುದ್ರಾಕ್ಷಿಯನ್ನು ನೋಡುವುದು ಮತ್ತು ಧರಿಸುವುದು ಮಹಾನ್ ಪುಣ್ಯ ಎಂದು ನಂಬಲಾಗಿದೆ.ರುದ್ರಾಕ್ಷದಲ್ಲಿರುವ ರೇಖೆಗಳನ್ನು ಮುಖಗಳೆಂದು ಕರೆಯುತ್ತೇವೆ. 5 ರೇಖೆಗಳಿದ್ದರೆ ಅದನ್ನು ಐದು ಮುಖದ ರುದ್ರಾಕ್ಷ ಎಂದು ಕರೆಯಲಾಗುತ್ತದೆ ಮತ್ತು ಆರು ರೇಖೆಗಳಿದ್ದರೆ ಅದನ್ನು ಆರು ಮುಖದ ರುದ್ರಾಕ್ಷ ಎಂದು ಕರೆಯಲಾಗುತ್ತದೆ. ಒಟ್ಟು 1-21 ಮುಖದ ರುದ್ರಾಕ್ಷಗಳಿವೆ. ಪ್ರತಿಯೊಂದೂ ವಿಶಿಷ್ಟ ಪ್ರಯೋಜನಗಳನ್ನು ಒದಗಿಸಬಹುದು.ರುದ್ರಾಕ್ಷಿ ಧಾರಣೆಯಿಂದ ಜೀವನದಲ್ಲಾಗುವ ಪವಾಡ ಏನು..? ಅಮಿತಾಬಚ್ಚನ್ ಬದುಕಲ್ಲಿ ರುದ್ರಾಕ್ಷಿ ಬೀರಿದ ಪ್ರಭಾವ ಏನು..?ನಟರು-ಮಂತ್ರಿಮಾಗಧರೆಲ್ಲ ರುದ್ರಾಕ್ಷಿ ಧರಿಸುವುದು ಯಾಕೆ..? ರುದ್ರಾಕ್ಷಿ ಯಾವೆಲ್ಲ ಆರೋಗ್ಯ ಸಮಸ್ಯೆಗೆ ಸಂಜೀವಿನಿಯಾಗಿದೆ ಗೊತ್ತಾ..? ನೀವು ಎಷ್ಟು ಮುಖದ ರುದ್ರಾಕ್ಷಿ ಧಾರೆಣೆ ಮಾಡಬೇಕು..?ವಿದ್ಯಾರ್ಥಿಗಳು ಎಷ್ಟು ಮುಖದ ರುದ್ರಾಕ್ಷಿ ಧರಿಸಬೇಕು..? ವ್ಯಾಪಾರವೃದ್ಧಿಯಲ್ಲಿ ರುದ್ರಾಕ್ಷಿ ಪಾತ್ರವೇನು..? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.