Jan 9, 2021, 1:59 PM IST
ಭಕ್ತ ಅಂಬರೀಶ ಕಾರ್ತೀಕ ಮಾಸದಲ್ಲಿ ವ್ರತವೊಂದನ್ನು ಶುರುಮಾಡುತ್ತಾನೆ. ಕಾರ್ತಿಕದಿಂದ ಕಾರ್ತೀಕದವರೆಗೆ ಪ್ರತಿ ತಿಂಗಳು ಏಕಾದಶಿ ಮಾಡಿ, ದ್ವಾದಶಿ ದಿನ ಬ್ರಾಹ್ಮಣರಿಗೆ ಭೋಜನದ ವ್ಯವಸ್ಥೆ ಮಾಡುತ್ತಾನೆ. ಒಮ್ಮೆ ದ್ವಾದಶಿ ಕಾರ್ಯಕ್ರಮಕ್ಕೆ ದೂರ್ವಾಸ ಮುನಿಗಳು ಅಲ್ಲಿಗೆ ಬರುತ್ತಾರೆ.
ಭಗವಂತನಲ್ಲಿ ಭಕ್ತಿ ಹೇಗಿರಬೇಕೆಂದರೆ ಭಕ್ತ ಅಂರೀಶನಂತಿರಬೇಕು..!
ಅನುಷ್ಠಾನ ಮುಗಿಸಲು ನದಿಗೆ ಹೋದ ದೂರ್ವಾಸರು ಎಷ್ಟೋತ್ತಾದರೂ ಬರುವುದಿಲ್ಲ. ಉಭಯ ಸಂಕಟಕ್ಕೆ ಸಿಲುಕಿದ ಅಂಬರೀಶ, ಏನು ಮಾಡುವುದೆಂದು ಬ್ರಾಹ್ಮಣರನ್ನು ಕೇಳುತ್ತಾನೆ. ನೀರು ಕುಡಿ ಎಂದು ಬ್ರಾಹ್ಮಣರು ಹೇಳುತ್ತಾರೆ. ಅಷ್ಟೊತ್ತಿಗೆ ದೂರ್ವಾಸರು ಅಲ್ಲಿಗೆ ಬರ್ತಾರೆ. ಕೋಪಗೊಂಡು ಅಂಬರೀಶನಿಗೆ ಶಾಪ ಕೊಡ್ತಾರೆ. ಆಗ ಅಲ್ಲಿಗೆ ಸುದರ್ಶನ ಚಕ್ರ ಬಂದು ಅಂಬರೀಶನನ್ನು ಕಾಪಾಡುತ್ತದೆ. ದೂರ್ವಾಸರನ್ನು ಅಟ್ಟಿಸಿಕೊಂಡು ಹೋಗುತ್ತದೆ. ಮುಂದೇನಾಗುತ್ತದೆ..?