Oct 2, 2021, 3:12 PM IST
ಪಾಂಡವರು ದ್ರುಪದ ರಾಜನ ಅರಮನೆಯಲ್ಲಿ ಆಶ್ರಯ ಪಡೆದಿರುತ್ತಾರೆ. ಅಲ್ಲಿಗೆ ವಿದುರ ಬರುತ್ತಾನೆ. ಪಾಂಡವರನ್ನು ಕಳುಹಿಸಿಕೊಡುವಂತೆ ದ್ರುಪದನಲ್ಲಿ ಕೇಳಿಕೊಳ್ಳುತ್ತಾನೆ. ನಾನಾಗಿಯೇ ಅವರಲ್ಲಿ ಹೊರಡಿ ಎಂದು ಕೇಳುವುದು ಸರಿಯಲ್ಲ. ಅವರಿಗೆ ಇಷ್ಟ ಬಂದಾಗ ಹೊರಡಲಿ ಎನ್ನುತ್ತಾನೆ. ಆಗ ಯುಧಿಷ್ಠರ, ದ್ರುಪದರೇ, ನಾವು ಪರಾಧೀನರು. ನಾವು ಈಗಲೇ ಹೊರಡುತ್ತೇವೆ ಎಂದು ಹಸ್ತಿನಾಪುರಕ್ಕೆ ಹೊರಡುತ್ತಾರೆ. ಹಸ್ತಿನಾಪುರದಲ್ಲಿ ಪುರಜನರು ಖುಷಿಯಿಂದ ಸ್ವಾಗತಿಸುತ್ತಾರೆ.