Sep 21, 2021, 5:12 PM IST
ಗುರು ದ್ರೋಣಾಚಾರ್ಯರ ಅಣತಿಯಂತೆ ಕೌರವ, ಪಾಂಡವರು ದ್ರುಪದನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಅರ್ಜುನನ ಪ್ರತಾ ತಾಳಲಾರದೇ ದ್ರುಪದನ ತಮ್ಮ ಸತ್ಯಜಿತ್, 100 ಬಾಣಗಳನ್ನು ಅರ್ಜುನನ ಮೇಲೆ ಪ್ರಯೋಗ ಮಾಡುತ್ತಾನೆ. ಸತ್ಯಜಿತ್ ಓಡಿ ಹೋಗುತ್ತಾನೆ. ನಂತರ ಅರ್ಜುನ- ದ್ರುಪದನ ನಡುವೆ ಘನಘೋರ ಯುದ್ಧ ನಡೆಯುತ್ತದೆ. ದ್ರುಪದ ಸೋತು ಹೋಗುತ್ತಾನೆ. ಆತನನ್ನು ಕರೆತಂದು ದ್ರೋಣರಿಗೆ ತಂದೊಪ್ಪಿಸುತ್ತಾನೆ. ಅರ್ಜುನನ ಪರಾಕ್ರಮ ನೋಡಿ ದ್ರೋಣರಿಗೆ ಖುಷಿಯಾಗುತ್ತದೆ.