ಮಹಾಭಾರತ: ಗುರು ದ್ರೋಣಾಚಾರ್ಯರು ಅರ್ಜುನನಿಂದ ಕೇಳಿದ ಗುರು ದಕ್ಷಿಣೆ

Sep 23, 2021, 4:12 PM IST

ನನಗೆ ಮಂತ್ರೋಪದೇಶ ಮಾಡಿದ ದ್ರೋಣಾಚಾರ್ಯರಿಗೆ ಗುರು ದಕ್ಷಿಣೆಯಾಗಿ ಏನನ್ನಾದರೂ ಕೊಡಬೇಕಲ್ಲ ಎಂದು ಅರ್ಜುನ ಯೋಚಿಸುತ್ತಿರುತ್ತಾನೆ. ಆಗ ದ್ರೋಣರು, ಅರ್ಜುನ, ನೀನು ನನಗೆ ಗುರು ದಕ್ಷಿಣೆಯಾಗಿ ಯಾವ ಪ್ರತ್ಯೇಕ ವಸ್ತುವನ್ನೂ ಕೊಡಬೇಕಿಲ್ಲ. ಮುಂದೆ ಯಾವಾಗಲಾದರೂ ನಾನು ನಿನ್ನ ವಿರುದ್ಧ ಯುದ್ಧಕ್ಕೆ ನಿಂತರೆ ನೀನು ನನ್ನ ಜೊತೆ ಯುದ್ಧ ಮಾಡಲೇಬೇಕು ಎಂದು ಆಜ್ಞೆ ಮಾಡುತ್ತಾರೆ. ಹಾಗೇ ಆಗಲಿ ಸ್ವಾಮಿ ಎಂದು ಅರ್ಜುನ ಅಂಗೀಕರಿಸುತ್ತಾನೆ.