Jan 12, 2021, 2:56 PM IST
ಬಾಲಕೃಷ್ಣನ ಲೀಲೆಗಳು ಒಂದೆರಡಲ್ಲ. ತುಂಟ ಕೃಷ್ಣ ಬಗ್ಗೆ ಗೋಪಿಕೆಯರು ಯಶೋಧೆ ಬಳಿ ದೂರು ನೀಡುತ್ತಾರೆ. ನಿನ್ನ ಮಗ ಕರುವಿಗೆ ಹಸುವಿನ ಹಾಲು ಕುಡಿಸುತ್ತಾನೆ, ಬೆಣ್ಣೆಯನ್ನೆಲ್ಲಾ ತಿನ್ನುತ್ತಾನೆ, ಅತ್ತೆ ಸೊಸೆ ಮಧ್ಯೆ ತಂದಿಡುತ್ತಾನೆ ಅಂತೆಲ್ಲಾ ದೂರು ಕೊಡುತ್ತಾರೆ. ಆಗ ಯಶೋಧೆ ಇನ್ನು ಮುಂದೆ ಕೃಷ್ಣ ಹೀಗೆ ಮಾಡುವುದಿಲ್ಲ ಎಂದು ಹೇಳಿ ಕಳುಹಿಸುತ್ತಾಳೆ. ಕೃಷ್ಣಾ, ಯಾಕೆ ಹೀಗೆ ಮಾಡ್ತೀಯ ಮಗನೇ ಎಂದು ಕೇಳುತ್ತಾಳೆ. ನಾನು ಹಾಗೆ ಮಾಡಿಲ್ಲಮ್ಮ ಅಂತಾನೆ.