Jun 7, 2021, 4:11 PM IST
ತಾಯಿ ಜಗನ್ಮಾತೆ, ಹಿಮವಂತನಲ್ಲಿ ಹೇಳುತ್ತಾಳೆ. 'ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ. ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ನೆಲೆಸಿದ್ದೇನೆ. ನನ್ನನ್ನು ಯಾರು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೋ, ವ್ರತಗಳನ್ನು ಮಾಡುತ್ತಾರೋ ಅವರಿಗೆ ನಾನು ಒಲಿಯುತ್ತೇನೆ. ನಿತ್ಯ ನೈಮಿತ್ತಿಕ ಪೂಜೆಗಳು ನನಗೆ ಅತ್ಯಂತ ಪ್ರಿಯವಾಗಿದ್ದು. ಸುಮಂಗಲಿಯರನ್ನು, ವಟುಗಳನ್ನು, ಕನ್ನಿಕೆಯರನ್ನು ನನ್ನ ಸ್ವರೂಪ ಎಂದು ಭಾವಿಸಿ ಪೂಜಿಸಬೇಕು ಎಂದು ಶ್ರೀ ಮಾತೆ ಹೇಳುತ್ತಾಳೆ.