Dec 30, 2020, 9:37 AM IST
ಅಜಮಿಳನಿಗೆ ಸಾವು ಸನ್ನಿಹಿತವಾಗುತ್ತದೆ. ಏನು ಮಾಡಬೇಕು ಅಂತ ಗೊತ್ತಾಗದೇ, ಕೊನೆಯ ಮಗನ ಮೇಲಿನ ವ್ಯಾಮೋಹದಿಂದ ನಾರಾಯಣ, ನಾರಾಯಣ ಎಂದು ಕರೆಯುತ್ತಾನೆ. ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ನಾರಾಯಣ ಎಂದು ಕರೆದಿದ್ದಕ್ಕೆ ವಿಷ್ಣುದೂತರು ಅಲ್ಲಿಗೆ ಬರುತ್ತಾರೆ. ಯಮದೂತರು, ವಿಷ್ಣುದೂತರ ನಡುವೆ ಪಾಪ, ಪುಣ್ಯಗಳ ವಾದ ನಡೆಯುತ್ತದೆ. ಕೊನೆಗಾಲದಲ್ಲಿ ನಾರಾಯಣ ಸ್ಮರಣೆ ಮಾಡಿದ್ದರಿಂದ ಎಲ್ಲಾ ಪಾಪಗಳು ಕ್ಷೀಣವಾಗುತ್ತದೆ. ಹಾಗಾಗಿ ನೀವು ಕರೆದುಕೊಂಡು ಹೋಗುವಂತಿಲ್ಲ ಎಂದು ವಿಷ್ಣುದೂತರು ಹೇಳುತ್ತಾರೆ. ಹೀಗೆ ಯಮದೂತರು, ವಿಷ್ಣುದೂತರ ನಡುವೆ ವಾದ ಮುಂದುವರೆಯುತ್ತದೆ.