ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಇತಿಹಾಸವಿದು.. ಇಲ್ಲಿದೆ ವಿಸ್ಮಯಕಾರಿ ಸಂಗತಿ

Jan 16, 2024, 3:14 PM IST

ಗವಿಗಂಗಾಧರೇಶ್ವ ಸ್ವಾಮಿ ದೇಗುಲ 16ನೇ ಶತಮಾನದ ಕೆಂಪೇಗೌಡರ ಕಾಲದ್ದಾಗಿದ್ದು, ದೇಗುಲದಲ್ಲಿ ಸಾಕಷ್ಟು ಕೌತುಕಗಳು ಅಡಗಿವೆ. ಗವಿಪುರಂನಲ್ಲಿರುವ ನೈಸರ್ಗಿಕ ಗುಹೆಯಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು ಶಿವನಿಗೆ ಸಮರ್ಪಿಸಲಾಗಿದೆ ಮತ್ತು ಏಕಶಿಲೆಯ ಕಲ್ಲಿನಲ್ಲಿ ಕತ್ತರಿಸಲಾಗಿದೆ. ದೇವಾಲಯದ ಪ್ರಾಂಗಣವು ಹಲವಾರು ಏಕಶಿಲಾ ಶಿಲ್ಪಗಳನ್ನು ಒಳಗೊಂಡಿದೆ. ಗವಿ ಗಂಗಾಧರೇಶ್ವರ ದೇವಾಲಯದ ಪ್ರಮುಖ ಆಕರ್ಷಣೆಗಳೆಂದರೆ ಸೂರ್ಯ ಮತ್ತು ಚಂದ್ರರ ದೈತ್ಯಾಕಾರದ ಎರಡು ಗ್ರಾನೈಟ್ ಕಂಬಗಳು ಮತ್ತು ಮೇಲ್ಭಾಗದಲ್ಲಿ ಕುಳಿತ ಭಂಗಿಯಲ್ಲಿ ನಂದಿಯ ಹಲವಾರು ಕೆತ್ತನೆಗಳನ್ನು ಹೊಂದಿರುವ ಎರಡು ಕಂಬಗಳು ದೇವಾಲಯವು ತನ್ನ ನಾಲ್ಕು ಏಕಶಿಲೆಯ ಕಂಬಗಳಿಗೆ ಹೆಸರುವಾಸಿಯಾಗಿದೆ.