ಶ್ರೀ ಚಕ್ರವೆಂದರೆ ಮಾತೃಶಕ್ತಿಯ ಆರಾಧನೆ, ಪೂಜೆಯಿಂದ ಸಕಲ ಇಷ್ಟಾರ್ಥ ಸಿದ್ಧಿ

Oct 9, 2021, 9:24 AM IST

ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಅಂದರೆ ಶ್ರೀಚಕ್ರ. ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದು, ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ ಕಾಳೀ ಸ್ವರೂಪದಲ್ಲಿದ್ದ ದೇವಿಯನ್ನು ತಮ್ಮ ಸ್ತೋತ್ರಗಳಿಂದ ಸಂಪನ್ನಗೊಳಿಸಿದರು. ಈ ಯಂತ್ರದ ಮೇಲ್ಮುಖ ಅಗ್ನಿತತ್ವ ಹೊಂದಿದ್ದರೆ ಅದರ ಸುತ್ತಲೂ ಇರುವ ವೃತ್ತ ವಾಯುತತ್ವವನ್ನು ಹೊಂದಿದೆ. ಮಧ್ಯ ಬಿಂದು ಜಲತತ್ವವನ್ನು ಹೊಂದಿದ್ದು, ಅದರ ತಳ ಭೂತತ್ವವನ್ನು ಹೊಂದಿದೆ.