Oct 8, 2019, 4:50 PM IST
ಇಡಿ ಭಾರತ ದೇಶ ಇದೀಗ ದಸರ ಸಂಭ್ರಮದ ಮೂಡಿನಲ್ಲಿದೆ.ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ದಸರ ಹಬ್ಬಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಅಂದಹಾಗೆ ದಸರ ಅಂದಾಕ್ಷಣ ನಮಗೆ ನೆನಪಾಗೋದು ಮೈಸೂರು ದಸರ ಮಾತ್ರ. ಆದರೇ ದಸರವನ್ನು ದೇಶಾದ್ಯಂತ ವಿಧ ವಿಧ ವಾಗಿ ಆಚರಿಸುತ್ತಾರೆ. ಕೆಲವೊಬ್ಬರು ನವಮಿ ದಶಮಿ ಅಂದ್ರೆ , ಇನ್ನು ಕೆಲವರು ದುರ್ಗಾ ಪೂಜಾಂತ ಕರಿತಾರೆ. ದಸರಾ ಸಂದರ್ಭದಲ್ಲಿ 9 ದಿನಗಳ ಕಾಲ ದೇವಿಯನ್ನು ಪೂಜಿಸುತ್ತಾರೆ. ಇನ್ನು ದಸರವನ್ನು ವಿಜೃಂಭಣೆಯಿಂದ ಆಚರಿಸೋದು ಬಂಗಾಳಿಗಳು. ಪಶ್ಚಿಮಬಂಗಾಳದಲ್ಲಿ ದಸರವೆಂದರೆ ದುರ್ಗಾ ಪೂಜೆ. ದುರ್ಗಾ ಪೂಜೆ ಬಂತೆಂದ್ರೆ ಸಂಜೆವೇಳೆ ಹಕ್ಕಿಗಳು ತಮ್ಮ ಗೂಡು ಸೇರುವಂತೆ.ಬಂಗಾಳಿಗಳು ಜಗತ್ತಿನೆಲ್ಲೆಡೆ ಎಲ್ಲೆ ಇದ್ರು ತಮ್ಮ ತವರೂರು ಸೇರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ತಮ್ಮ ಊರಿಗೆ ಮರಳಾಗದವರು ತಾವು ಇದ್ದಲ್ಲೇ ದುರ್ಗಾ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಬೆಂಗಳೂರಿನಲ್ಲೂ ದೊಡ್ಡ ಸಂಖ್ಯೆಯಲ್ಲೇ ಬೆಂಗಾಳಿಗಳು ನೆಲೆಸಿದ್ದಾರೆ. ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದಾರೆ. ಹಾಗೆ ನೋಡುವುದಾದರೆ ಪಶ್ಚಿಮ ಬಂಗಾಲದಲ್ಲಿ ಸಂಸ್ಕೃತಿಯಲ್ಲಿ ದುರ್ಗೆಯನ್ನು ಹೇಗೆ ಆರಾಧಿಸುತ್ತಾರೆ, ವಿಧಿ ವಿಧಾನಗಳೇನು? ತಿಳಿದು ಕೊಳ್ಳೋಣ ಇವತ್ತಿನ ಸ್ಟೋರಿಯಲ್ಲಿ.