Jan 9, 2021, 5:23 PM IST
ಭಾಗವತದ 10 ನೇ ಸ್ಕಂದ ಭಗವಂತನ ಮುಖವಿದ್ದಂತೆ. ಈ ಸ್ಕಂದಲ್ಲಿ 90 ಅಧ್ಯಾಯಗಳಿವೆ. 2940 ಶ್ಲೋಕಗಳಿವೆ. ಭಾಗವತದ ದಸಮಸ್ಕಂದದಲ್ಲಿ ಎಲ್ಲವೂ ಶ್ರೀಕೃಷ್ಣ ಮಯವೇ. ಶ್ರೀ ಕೃಷ್ಣನ ಲೀಲಾ ವಿನೋದಗಳೆಲ್ಲಾ ಅಡಕವಾಗಿದೆ. ವಸುದೇವನಿಗೆ ಶುದ್ಧವಾದ ಮನಸ್ಸಿತ್ತು. ದೇವಕಿಗೆ ನಿಷ್ಕಾಮ ಬುದ್ದಿಯಿತ್ತು. ಹಾಗಾಗಿ ಶ್ರೀಹರಿ ಪ್ರತ್ಯಕ್ಷನಾದ. ನಮ್ಮಲ್ಲೂ ಅದೇ ರೀತಿ ನಿಷ್ಕಾಮ ಬುದ್ದಿಯಿದ್ದರೆ ಭಗವಂತ ಹರಸುತ್ತಾನೆ ಎನ್ನುತ್ತದೆ ಭಾಗವತ.
ಭಾಗವತದಲ್ಲಿ ಬರುವ ರಾಮ -ಸೀತೆಯರ ಕತೆ ಕೇಳಿದರೆ ರಾಮಾಯಣ ಪಾರಾಯಣ ಮಾಡಿದಷ್ಟು ಫಲ ಲಭಿಸುವುದು