ಜಂಬೂದ್ವೀಪ ಎಂದು ಹೆಸರು ಬಂದಿದ್ಹೇಗೆ? ಚಿನ್ನಕ್ಕೆ ಜಂಬೂನಗ ಎನ್ನೋದ್ಯಾಕೆ?

Dec 28, 2020, 10:44 AM IST

ನಾವು ಜಂಬೂ ದ್ವೀಪದಲ್ಲಿದ್ದೇವೆ. ಇಲ್ಲಿ ಮೇರು ಪರ್ವತ ಬುಗುರಿಯಾಕಾರದಲ್ಲಿದೆ. ಮೇಲೆ ಹೋದಂತೆ ಅಗಲವಾಗುತ್ತದೆ. ಬುಗುರಿ ಭೂಮಿ ಮೇಲೆ ನಿಲ್ಲಲು ಸಾಧ್ಯವಿಲ್ಲ. ಅದಕ್ಕೆ ಭಗವಂತ ಈ ಮೇರು ಪರ್ವತದ 16 ಸಾವಿರ ಯೋಜನ ಭಾಗವನ್ನು ಭೂಮಿಯಲ್ಲಿ ಹೂತಿಟ್ಟಿದ್ದಾನೆ. ಅದಕ್ಕೆ ಅದು ಗಟ್ಟಿಯಾಗಿ ನಿಂತಿದೆ ಎನ್ನಲಾಗುತ್ತದೆ. ಇಲ್ಲಿ ನೇರಳೆ ಹಣ್ಣಿನ ಮರವಿದೆ. ಈ ವೃಕ್ಷ ಮೈಲಿಗಟ್ಟಲೇ ಅಗಲ ಹಾಗೂ ಎತ್ತರವಾಗಿದೆಯಂತೆ. ಇದರ ಹಣ್ಣು ಆನೆಯಷ್ಟು ದೊಡ್ಡದಾಗಿರುತ್ತದೆ ಎಂದು ಪುರಣ ಹೇಳುತ್ತದೆ. ಈ ಹಣ್ಣನ್ನು ನಾವು ಕೊಯ್ಯಲು ಸಾಧ್ಯವಿಲ್ಲ. ಅದು ಪಕ್ವವಾಗಿ ಬಿದ್ಧಾಗ ಅದರ ರಸ ನದಿಯಾಗಿ ಹರಿಯುತ್ತಂತೆ. ಅದನ್ನೇ ಜಂಬೂ ನದಿ ಎನ್ನುತ್ತಾರೆ. ಆ ರಸ ಮಣ್ಣಿನಲ್ಲಿ ಬೆರೆತು ಬಂಗಾರವಾಗುತ್ತಂತೆ..!