Jan 16, 2024, 5:03 PM IST
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದೆ. ಇಂದಿನಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪ್ರಾರಂಭಿಸಲಾಗಿದ್ದು, ಪೂರ್ವಭಾವಿ ಕಾರ್ಯಕ್ರಮಗಳು ನಡೆಯಲಿವೆ. ಸರಯೂ ನದಿಯ ದಡದಲ್ಲಿ ದಶವಿಧ ಸ್ನಾನ,ಮೂರ್ತಿಯ ಪರಿಸರ ಪ್ರವೇಶ,ತೀರ್ಥಪೂಜೆ, ಜಲ ಯಾತ್ರೆ ಮತ್ತು ಗಂಧಾಧಿವಾಸಗಳ ವಿಧಿವಿಧಾನ, ಔಷಧಾಧಿವಾಸ, ಕೇಸರಾಧಿವಾಸ ಸೇರಿದಂತೆ ಏಳು ದಿನ ಪೂರ್ವಭಾವಿಯಾಗಿರುವ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.