530 ಗ್ರಾಂ ತೂಕ, 9 ಮೀ. ಉದ್ದ; ಈ ವಸ್ತ್ರದ ಬೆಲೆ ಬರೋಬ್ಬರಿ 22 ಲಕ್ಷ!

Oct 14, 2019, 8:46 PM IST

ಚಿನ್ನ, ಬೆಳ್ಳಿ ದಾರಗಳನ್ನು ಬಳಸಿ ತಯಾರಿಸಲಾಗುವ ವಸ್ತ್ರವೇ ಸಫಾ. ಜೈಪುರದ ಭೂಪೇಂದ್ರ ಸಿಂಗ್ ಶೇಖಾವತ್ ಎಂಬ ವಸ್ತ್ರ-ವಿನ್ಯಾಸಗಾರ, 24 ಕ್ಯಾರೆಟ್  ಚಿನ್ನ ಬಳಸಿ ರಜಪೂತ ಶೈಲಿಯ ಸಫಾ ತಯಾರಿಸಿದ್ದಾರೆ. 

ಇದು ರಜಪೂತ ಪುರುಷರ ಸಾಂಪ್ರದಾಯಿಕ ಧಿರಿಸು, ಸುಮಾರು 80 ವರ್ಷಗಳ ಹಿಂದಿನವರೆಗೂ ರಜಪೂತರು ಸಫಾ ಧರಿಸುತ್ತಿದ್ದರು. ಬಹುಷ: ದುಬಾರಿ ಎಂಬ ಕಾರಣಕ್ಕೆ ಜನ ಇದನ್ನು ಧರಿಸುವುದನ್ನೇ ಬಿಟ್ಟಿದ್ದಾರೆ. 

 24 ಕ್ಯಾರೆಟ್ ಚಿನ್ನದ ಸಫಾ ರೆಡಿ ಮಾಡಲು ಶೇಖಾವತ್‌ಗೆ 4 ವರ್ಷಗಳು ತಗುಲಿವೆ. 530 ಗ್ರಾಂ ತೂಗುವ, 9 ಮೀ. ಉದ್ದದ ಈ ವಸ್ತ್ರದ ಬೆಲೆ ಬರೋಬ್ಬರಿ 22 ಲಕ್ಷ ರೂಪಾಯಿ! ಇಲ್ಲಿದೆ ಸಫಾ ಬಗ್ಗೆ ಮತ್ತಷ್ಟು ಮಾಹಿತಿ....

ಜೀವನಶೈಲಿ | ಫ್ಯಾಶನ್ | ಮಹಿಳೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ