Apr 13, 2023, 9:42 PM IST
ರಾಕಿಂಗ್ ಸ್ಟಾರ್ ಯಶ್ 19ನೇ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು ಹೊಸ ಅಪ್ಡೇಟ್‌ಗಾಗಿ ದುಂಬಾಲು ಬಿದ್ದಿದ್ದಾರೆ. ಇನ್ನೊಂದು ಕಡೆ ಫ್ಯಾನ್ಸ್ ಶೇರ್ ಮಾಡಿದ ರಾಕಿ ಭಾಯ್ ಹಳೆಯ ಅಪರೂಪದ ವಿಡಿಯೋ ವೈರಲ್ ಆಗಿದೆ. ಹೌದು! ಯಶ್ ತನ್ನ ತಂಗಿ ಮಗನ ಜೊತೆ ಭರ್ಜರಿ ಫೈಟ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋವನ್ನ ಯಶ್ ಅಭಿಮಾನಿಗಳು ವೈರಲ್ ಮಾಡಿ, ನಾವು ಈ ಹಳೇ ವಿಡಿಯೋಗಳನ್ನ ನೋಡಿ ಖುಷಿ ಪಡುತ್ತಿದ್ದೇವೆ ಎಂದು ಕಾಮೆಂಟ್ ಮಾಡುತ್ತಿದ್ದು, ಆದಷ್ಟು ಬೇಗ ಹೊಸ ಸಿನಿಮಾ ಅನೌನ್ಸ್ ಮಾಡಿ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.