Dec 19, 2024, 4:34 PM IST
ಮೈ ಜುಂ ಅನ್ಸುತ್ತೆ… ಇದೆಲ್ಲಾ ನಿಜಕ್ಕೂ ಸಾಧ್ಯಾನಾ ಅನ್ನೋ ಪ್ರಶ್ನೆಗಳು ಎದ್ದು ಕೂರುತ್ವೆ.. ಇವರಿಗೆಲ್ಲಾ ಎಂಟು ಗುಂಡಿಗೇನೆ ಇಬೇಕೇನೋ.. ಕೆಲವು ವಿಡಿಯೋಗಳನ್ನ ನೋಡಿದ್ರೆ, ನಿಮಗೂ ಇದೇ ಫೀಲಿಂಗ್ ಬಂದಿರುತ್ತೆ. ಅಂತಹ ಒಂದಿಷ್ಟು ರೋಮಾಂಚನಕಾರಿ ವಿಡಿಯೋಗಳನ್ನ ನಿಮಗಾಗಿ ಹುಡುಕಿ ತಂದಿದ್ದೇವೆ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್. ಬೆಂಕಿ ಅಂದ್ರೆ ಭಯ ಪಡೋ ಜನ್ರೇ ಜಾಸ್ತಿ.. ಆದ್ರೆ ಇಲ್ಲೋಂದಿಷ್ಟು ಜನರಿದ್ದಾರೆ ಅವರು ಮಾಡೋ ಸಾಹಸಕ್ಕೆ.. ಅವರು ಮಾಡೋ ಸರ್ಕಸ್ಗೆ ಬೆಂಕಿಗೂ ಬೆವರು ಬಂದು ಹೋಗ್ಬೇಕು ಹಾಗಿದೆ ಅವರ ಅಬ್ಬರ. ಫೈಯರ್ಗೆ ಸವಾಲು ಹಾಕೋ ಆ ಜನರ ವಿಡಿಯೋಗಳನ್ನ ನೋಡೋಕೆ ಮಾತ್ರ ಚೆಂದ… ಪ್ಲೀಸ್ ಡೋಂಟ್ ಟ್ರೈ ದಿಸ್ ಅಂತ ಹೇಳ್ತಾ ಆ ದೃಶ್ಯಗಳನ್ನ ನೋಡ್ಕೊಂಡು ಬಂದ್ಬಿಡೋಣ ಬನ್ನಿ. ವೇಟ್ ವೇಟ್..ಅದ್ರ ಜೊತೆಗೆ ಎಂದಾದ್ರೂ ತಲೆಯಲ್ಲಿ ಮೆಟ್ಟಿಲುಗಳನ್ನ ಹತ್ತೋದನ್ನ ನೋಡಿದ್ದೀರಾ..?
ಹಗ್ಗದ ಮೇಲೆ ನಡೆಯೋದೇ ದೊಡ್ಡ ಚಾಲೆಂಜ್.. ಆದ್ರಲ್ಲೂ ಆಕಾಶದ ಎತ್ತರದಲ್ಲಿ ಹಗ್ಗದ ಮೇಲೆ ನಡೆಯೋದು ಅಂದ್ರೆ ಅದು ಸಾಮಾನ್ಯದ ಮಾತಲ್ಲ. ಒಂದು ಗಗನಚುಂಬಿ ಬಿಲ್ಡಿಂಗ್ನಿಂದ ಇನ್ನೊಂದು ಗಗನಚುಂಬಿ ಬಿಲ್ಡಿಂಗ್ಗೆ ಹಗ್ಗದ ಮೇಲೆ ನಡ್ಕೊಂಡು ಹೋಗಿ ಇಲ್ಲೊಂದಿಷ್ಟು ಜನ ರೆಕಾರ್ಡ್ ಸೃಷ್ಟಿಸಿದ್ದಾರೆ. ಹಾಗೇನೆ ಮತ್ತೊಬ್ಬ ಅಂಗವಿಕಲ ವ್ಯಕ್ತಿ, ಅಂಗವಿಕಲತೆ ಅನ್ನೋದು ದೇಹಕ್ಕೆ ಮಾತ್ರ ಮನಸ್ಸಿಗಲ್ಲ.. ಛಲ ಇದ್ರೆ ಏನ್ ಬೇಕಾದ್ರೂ ಮಾಡ್ಬೋದು ಅಂತ ಸಾಧಿಸಿ ತೋರಿಸಿದ್ದಾನೆ. ಒಂದು ಚೂಪಾದ ಮೊಳೆ ಕಾಲಿಗೆ ಚಚ್ಚಿದ್ರೆ ಜೀವವೇ ಹೋದ್ಹಾಗೆ ಆಗುತ್ತೆ. ಇದ್ರೆ ಇಲ್ಲೊಂದು ತಂಡ ಅದೇ ಚೂಪಾದ ಮೊಳೆಯ ಮೇಲೆ ಮಲಗಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ.
ಅಬ್ಬಬ್ಬಾ ಕೇಳೋದಿಕ್ಕೇನೆ ಇಂಟ್ರಸ್ಟಿಂಗ್ ಅನ್ಸುತ್ತೆ. ಬರೀ ಕೇಳೋದೇನು ನೋಡ್ಕೊಂಡೇ ಬರೋಣ.. ಅದ್ರ ಜೊತೆಗೆ ಒಂದು ದೊಡ್ಡ ಬಿಲ್ಡಿಂಗ್ ಕ್ಷಣಮಾತ್ರದಲ್ಲಿ ನೆಲಕ್ಕೆ ಉರುಳೋ ಮತ್ತೊಂದು ವಿಡಿಯೋನು ಇದೆ. ಕಾರ್ಗಳಲ್ಲಿ ಸ್ಟಂಟ್ ಮಾಡೋದ್ನ ನೀವು ನೋಡಿರ್ತೀರಿ.. ಆದ್ರೆ, ಎಂದಾದ್ರು ಮಾನ್ಸ್ಟರ್ ಟ್ರಕ್, ಹಾಗೇನೆ ಟ್ರಕ್ನಿಂದ ಮಾಡೋ ಸ್ಟಂಟ್ನ ನೋಡಿದ್ದಿರಾ..? ಅದ್ನ ನೋಡಿದ್ರೆ ಮೈ ಜುಂ ಅನ್ನೋದಂತು ಫಿಕ್ಸ್. ಕಾರ್ಗಳಲ್ಲಿ ಸ್ಟಂಟ್ ಮಾಡೋದು ಓಕೆ… ಆದ್ರೆ ಟ್ರಕ್ಗಳಲ್ಲಿ, ಅದ್ರಲ್ಲೂ ಮಾನ್ಸ್ಟರ್ ಟ್ರಕ್ಗಳಲ್ಲಿ ಸ್ಟಂಟ್ ಮಾಡೋ ಎಂಟೆದೆ ಭಂಟರು ಇವ್ರು.. ಆ ದೈತ್ಯ ವಾಹನಗಳಲ್ಲಿ ಅವರು ಮಾಡೋ ಸಾಹಸವೊಂತೂ ಅಲ್ಟಿಮೇಟ್. ಇನ್ಯಾಕೆ ತಡ ಆ ರೋಮಾಂಚನಕಾರಿ ಸ್ಟಂಟ್ಗಳನ್ನ ನೋಡೋಣ. ಆದ್ರ ಜೊತೆಗೆ ಇಲ್ಲೊಂದಿಷ್ಟು ಬಾಹುಬಲಿಗಳಿದ್ದಾರೆ. ಮಾರ್ಷಲ್ ಆರ್ಟ್ನ ಪಂಟರ್ ಒಬ್ಬ ಇದ್ದಾನೆ.
ಆತ ತಲೆಯಲ್ಲೇ ಗಾಜಿನ ಜ್ಯೂಸ್ ಬಾಟಲ್ನ ಓಪನ್ ಮಾಡ್ತಾನೆ. ತಲೆಯಲ್ಲೇ ಡಿಚ್ಚಿ ಕೊಟ್ಟು ತೆಂಗಿನಕಾಯಿಗಳನ್ನ ಒಡೆದು ಹಾಕ್ತಾನೆ.. ಇನ್ನು, ಮತ್ತೂ ಒಬ್ಬ ಇದ್ದಾನೆ..ಆತ ಮರ ಕಟ್ ಮಾಡೋ ಮಷೀನ್ನಲ್ಲಿಯೇ ತನ್ನ ಕೈಚಳಕ ತೋರಿಸ್ತಾನೆ. ಆ ಇಬ್ಬರು ಸಾಹಸಿಗರನ್ನ ನೋಡೋಣ. ಮಾರ್ಷಲ್ ಆರ್ಟ್ನಲ್ಲಿ ಪಳಗಿರೋರು ಏನಾದ್ರೂ ಒಂದು ಸ್ಟಂಟ್ನ ಮಾಡ್ತಾರೆ. ಆದ್ರೆ ಇಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ನಾನಾ ರೀತಿ ತನ್ನ ಶಕ್ತಿ ಪ್ರದರ್ಶನ ಮಾಡ್ತಿದ್ದಾನೆ. ಆತನ ಸಾಹಸಕ್ಕೆ ಗಿನ್ನಿಸ್ ರೆಕಾರ್ಡ್ ಕೂಡ ಅವನನ್ನ ಹುಡುಕಿಕೊಂಡು ಬಂದಿದೆ. ಹಾಗಿದ್ರೆ ಯಾರಾತ..? ಹೇಗಿದೆ ಅವನ ಸ್ಟಂಟ್ ಅನ್ನೋದನ್ನ ನೋಡೋಣ. ಆದ್ರ ಜೊತೆಗೆ ಮರ ಕಟ್ ಮಾಡೋ ಮಷೀನ್ನಲ್ಲಿಯೇ ತನ್ನ ಕೈಚಳಕ ತೋರಿಸೋ ಆ ಕಲಾವಿದನ ವಿಡಿಯೋವನ್ನೂ ನೋಡ್ಕೊಂಡು ಬರೋಣ ಬನ್ನಿ.