'ಉತ್ತರಕಾಂಡ' ಬೋಟ್ ಏರಿದ್ರು ಕರುನಾಡ ಚಕ್ರವರ್ತಿ! ಮತ್ತೆ ಎದುರಾಗುತ್ತಾರಾ ಟಗರು ಜೋಡಿ ಡಾಲಿ-ಶಿವಣ್ಣ?

Mar 30, 2023, 9:42 PM IST

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ್ ಅಭಿಮಾನಿಗಳು ಹೊಯ್ಸಳ ಸಿನಿಮಾ ಗುಂಗಿನಲ್ಲಿದ್ದಾರೆ. ಇದೀಗ ಅವರಿಗೆಲ್ಲಾ ಮತ್ತೊಂದು ಸಂಭ್ರಮದ ಸುದ್ದಿ ಸಿಕ್ಕಿದೆ. ಅದೇನ್ ಗೊತ್ತಾ? ಟಗರು ಜೋಡಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಹಾಗು ಡಾಲಿ ಧನಂಜಯ್ ಮತ್ತೆ ಎದುರಾಗುತ್ತಿದ್ದಾರೆ. ಡಾಲಿಯ ಮೋಸ್ಟ್ ವಾಂಟೆಡ್ ಮೂವಿ ಉತ್ತರಕಾಂಡ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಉತ್ತರ ಕಾಂಡದಲ್ಲಿ ಒಂದ್ ಕಡೆ ಶಿವಣ್ಣ ಇದ್ರೆ ಮತ್ತೊಂದ್ ಕಡೆ ಡಾಲಿ ಧನಂಜಯ್ ಮೇಳೈಸೋದು ನಿಕ್ಕಿ ಆಗಿದೆ. 

ಈ ಕಾಂಬಿನೇಷನ್ ಭರ್ಜರಿ ಬಾಡೂಟ ಹಾಕೋದಂತು ಪಕ್ಕಾ. ಆದ್ರೆ ಮತ್ತೊಂದು ಕುತೂಹಲ ಏನ್ ಗೊತ್ತಾ.? ಈ ಮೂವಿಯಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಗು ಸಿಂಗಾರ ಸಿರಿ ಸಪ್ತಮಿ ಗೌಡ ಇಬ್ಬರು ನಟಿಸುತ್ತಿದ್ದಾರೆ. ಈ ಇಬ್ಬರಲ್ಲಿ ಶಿವರಾಜ್‌ ಕುಮಾರ್‌ಗೆ ಜೋಡಿ ಆಗೋದ್ಯಾರು. ರಮ್ಯಾ ಡಾಲಿಗೆ ಕಾಂಬಿನೇಷನ್ ಆಗ್ತಾರೆ ಸೆಂಚುರಿ ಸ್ಟಾರ್ಗೆ ಜೋಡಿ ಆಗ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ. ಉತ್ತರಕಾಂಡ ಉತ್ತರ ಕರ್ನಾಟಕದಲ್ಲಿ ನಡೆಯುವ ಗ್ಯಾಂಗ್ ವಾರ್ ಕಥೆಯ ಸಿನಿಮಾ. ಕ್ವೀನ್ ರಮ್ಯಾ ಸುತ್ತ ಸುತ್ತು ಸ್ಟೋರಿ ಇಲ್ಲಿದೆ. ನಿರ್ದೇಶಕ ರೋಹಿತ್ ಪದಕಿ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಕೂಡ ಇದ್ದಾರೆ ಅಂತ ಹೇಳೋ ಮೂಲಕ ಉತ್ತರ ಕಾಂಡದ ಬಿಸಿ ಏರಿಸಿದ್ದಾರೆ.