ಕ್ರೈಂ.. ಸಸ್ಪೆನ್ಸ್.. ಥ್ರಿಲ್.. ಮಿಸ್ಟರಿ ಸ್ಟೋರಿ: ಏಪ್ರಿಲ್ 14ಕ್ಕೆ ತೆರೆ ಮೇಲೆ 'ಶಿವಾಜಿ ಸುರತ್ಕಲ್ 2'

Apr 2, 2023, 9:01 PM IST

ಇಷ್ಟು ದಿನ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದವರು, ಕೆಜಿಎಫ್‌ನ ರಾಕಿ, ಕಾಂತಾರದ ಶಿವ, ಕಬ್ಜದ ಕಬ್ಜದ ಅರ್ಕೇಶ್ವರ, ವಿಕ್ರಾಂತ್ ರೋಣ, 777 ಚಾರ್ಲಿಯ ಧರ್ಮ.. ಆದ್ರೆ ಈಗ ನಿಮ್ಮ ಮುಂದೆ ಬರೋದಕ್ಕೆ ರೆಡಿಯಾಗಿದ್ದಾರೆ ಶಿವಾಜಿ. ಇಷ್ಟು ದಿನ ನೀವೆಲ್ಲಾ ಮಾಸ್, ಲವ್ ಸೆಂಟಿಮೆಂಟ್, ಡಿವೋಷನ್ ಎಂಟರ್ಟೈನ್ಮೆಂಟ್, ಆ್ಯಕ್ಷನ್ ಥ್ರಿಲ್ಲರ್ ಸ್ಟೋರಿ ನೋಡಿ ಖುಷಿ ಪಟ್ಟಿದ್ದೀರಾ. ಆದ್ರೆ ಈಗ ಕ್ರೈಂ.. ಸಸ್ಪೆನ್ಸ್.. ಥ್ರಿಲ್.. ಮಿಸ್ಟರಿ ಸ್ಟೋರಿ ನೋಡಿ ಥ್ರಿಲ್ ಆಗೋ ಟೈಂ ಬಂದಿದೆ. ನಿಮ್ಗೆ ಕ್ರೈಂ.. ಸಸ್ಪೆನ್ಸ್.. ಥ್ರಿಲ್.. ಮಿಸ್ಟರಿ ಕಥೆ ಹೇಳೋ ಸಿನಿಮಾವೇ ಶಿವಾಜಿ ಸೂರತ್ಕಲ್... ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದ ಟ್ರೈಲರ್ ನೋಡಿದ್ರೆ ನಿಮ್ಮನ್ನ ಶಿವಾಜಿ ಅನ್ನೋ ಈ ಪತ್ತೇಧಾರಿ ಸೀಟಿನ ತುದಿಗೆ ತಂದು ಕೋರಿಸುತ್ತಾನೆ ಅನ್ನಿಸುತ್ತೆ.  

ಶಿವಾಜಿ ಸುರತ್ಕಲ್ ಸಿನಿಮಾ ಚಾಪ್ಟರ್ 1 ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಸಹಜ ನಟ ರಮೇಶ್ ಅರವಿಂದ್ ನಟನೆ ನಿಮ್ಮನ್ನ ಮಂತ್ರಮುದ್ಧರನ್ನಾಗಿಸಿತ್ತು. ಆ ಸಿನಿಮಾದಲ್ಲಿ ಡಿಟೆಕ್ಟೀವ್ ಆಗಿ ರಣಗಿರಿ ರಹಸ್ಯ ಬೇಧಿಸಿದ್ದ ರಮೇಶ್ ಅರವಿಂದ್ ಶಿವಾಜಿ ಸೂರತ್ಕಲ್ ಚಾಪ್ಟರ್2ನಲ್ಲಿ ಮಾಯಾವಿ ರಹಸ್ಯ ಬೇದಿಸೋಕೆ ರೆಡಿಯಾಗಿದ್ದಾರೆ. ಶಿವಾಜಿ ಸುರತ್ಕಲ್ ಪಾರ್ಟ್‌- 2ಗೆ ತಕ್ಕಂತೆ ಎಲ್ಲವೂ ಡಬಲ್ ಆಗಿದೆ. ಸ್ಟೋರಿ, ಸ್ಕ್ರೀನ್‌ಪ್ಲೇ ಕೂಡ ಅಷ್ಟೇ ಕಿಕ್ ಕೊಡುತ್ತಿದೆ . ಈ ಬಾರಿ ಶಿವಾಜಿ ಸುರತ್ಕಲ್ ಕೇಸ್‌ ನಂ. 131 ಹಿಂದೆ ಬಿದ್ದಿದ್ದಾನೆ. ಮತ್ತಷ್ಟು ಸವಾಲುಗಳು ಶಿವಾಜಿಗೆ ಎದುರಾಗಿದೆ. ಕಣ್ಣ ಮುಂದೆ ಇರುವ ಕೊಲೆಗಾರನನ್ನು ಹಿಡಿಯಲು ಶಿವಾಜಿ ಏನೆಲ್ಲಾ ಸರ್ಕಸ್ ಮಾಡ್ತಾನೆ ಅನ್ನೋದೆ ಇಂಟ್ರೆಸ್ಟಿಂಗ್ ಸ್ಟೋರಿ. 

ಒಂದರ ಹಿಂದೊಂದರಂತೆ ನಡೆಯುವ ಯುವತಿಯರ ಕೊಲೆಗಳು. ಯಾರು ಆ ಕೊಲೆಗಳನ್ನು ಮಾಡ್ತಿದ್ದಾರೆ? ಆತನಿಗೂ ಶಿವಾಜಿಗೂ ಹಾಗೂ ವಿಕ್ಟಿಮ್‌ಗಳಿಗೂ ಇರುವ ಲಿಂಕ್ ಏನು? ಆ ಮಾಯಾವಿಯ ಜಾಲವನ್ನು ಶಿವಾಜಿ ಹೇಗೆ ಭೇದಿಸುತ್ತಾನೆ ಅನ್ನೋದು ನೋಡುಗರಿಗೆ ಮಜಾ ಕೊಡಲಿದೆ. ರಮೇಶ್ ಅರವಿಂದ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಾಜಿ ಸುರತ್ಕಲ್ ಮೇಲಾಧಿಕಾರಿ ಆಗಿ ನಟಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಇನ್ನುಳಿದಂತೆ ಶೋಭರಾಜ್, ನಾಜರ್, ರಾಧಿಕಾ ಚೇತನ್, ಚಿತ್ರದ ತಾರಾಗಣದಲ್ಲಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಸಿನಿಮಾ ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಬ್ಯಾನರ್‌ನಲ್ಲಿ ಅನೂಪ್ ಗೌಡ ಮತ್ತು ರೇಖಾ ಕೆ. ಎನ್ ನಿರ್ಮಾಣ ಮಾಡಿದ್ದಾರೆ. ಎಲೆಕ್ಷನ್, ಐಪಿಎಲ್ ಭರಾಟೆ ನಡುವೆ ಏಪ್ರಿಲ್ 14ಕ್ಕೆ ತೆರೆ ಮೇಲೆ ಶಿವಾಜಿ ಸುರತ್ಕಲ್ ಹೊಸ ಪ್ರಕರಣದ ತನಿಖೆ ಆರಂಭವಾಗಲಿದೆ.