James Pre Release Event: ಅಪ್ಪುವನ್ನು ಹುಡುಕಿಕೊಂಡು ಹೊರಡುವೆ ಎಂದ ರಾಘಣ್ಣ, ಶಿವಣ್ಣ ಕಣ್ಣೀರು

Mar 14, 2022, 10:50 AM IST

ಬೆಂಗಳೂರು (ಮಾ. 14): ಮಾರ್ಚ್ 17 ಕ್ಕೆ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಮಾರ್ಚ್ 13 ರಂದು ಅರಮನೆ ಮೈದಾನದಲ್ಲಿ ಪ್ರೀರಿಲೀಸ್ ಈವೆಂಟ್ ನಡೆಯಿತು. ಅಭಿಮಾನಿಗಳು, ಅಪ್ಪು ಹೆಸರಿನಲ್ಲಿ ಸಂಭ್ರಮಿಸಿದರು. ದೊಡ್ಮನೆ ಕುಟುಂಬದವರು, ಭಾವುಕರಾದರು. 

Puneeth Rajkumar James:ಅಪ್ಪು ಜೇಮ್ಸ್‌ಗೆ ಸಿಂಗಾರಗೊಂಡ ದಾವಣಗೆರೆ

ಪ್ರೀ ರಿಲೀಸ್ ಈವೆಂಟ್‌ನಲ್ಲಿ ಜೇಮ್ಸ್ ಟೀಸರ್, ಟ್ರೇಲರ್ ರಿಲೀಸ್ ಮಾಡಲಾಯ್ತು. ಈ ಸಂದರ್ಭದಲ್ಲಿ, ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ನಮಗೆ ಅವನನ್ನು ಬಿಟ್ಟು ಇರೋಕೆ ಆಗಲ್ಲ, ಅವನನ್ನೇ ಹುಡುಕಿಕೊಂಡು ಹೊರಡುತ್ತೇನೆ ಎಂದು ಹೇಳಿದಾಗ, ಶಿವಣ್ಣ ಕಣ್ಣೀರಿಟ್ಟರು.