ಕೆಜಿಎಫ್ ರಾಕಿ ಕೈ ತಪ್ಪಿತಾ ಶಿವಾಜಿ ರೋಲ್: ಅಭಿಮಾನಿಗಳ ಆಸೆಗೆ ಯಶ್ ಗಪ್‌ಚುಪ್!

Dec 8, 2022, 10:40 AM IST

ಛತ್ರಪತಿ ಶಿವಾಜಿ ಮಹಾರಾಜ್.. ಈ ಹೆಸರು ಕೇಳಿದ್ರೆ ಇಡೀ ದೇಶದ ಜನರ ಕಿವಿ ಒಮ್ಮೆಲೆ ನೆಟ್ಟಗಾಗುತ್ತೆ. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣ ಹೋರಾಟಗಾರರಲ್ಲಿ ವೀರಪುತ್ರ ಈ ಶಿವಾಜಿ. ಛತ್ರಪತಿ ಶಿವಾಜಿ ಜೀವನಗಾತೆ ಸಿನಿಮಾ ಬರಬೇಕು ನಾವು ನೋಡಿ ಸಂಭ್ರಮಿಸಬೇಕು ಅನ್ನೋ ಆಸೆ ಕೊಟ್ಯಾನು ಕೋಟಿ ಸಿನಿ ಪ್ರೇಕ್ಷಕರಲ್ಲಿದೆ. ಹೀಗಾಗಿ ಶಿವಾಜಿ ಮಹರಾಜ್ ಪಾತ್ರ ಯಾವ ಸ್ಟಾರ್ ಮಾಡಿದ್ರೆ ಚನ್ನಾಗಿರುತ್ತೆ ಅಂತ ಹುಡುಕಿದ್ರೆ ಸಿಕ್ಕಿದ್ದು ಕೆಜಿಎಫ್ ಕಿಂಗ್ ನ್ಯಾಷನಲ್ ಸ್ಟಾರ್ ಯಶ್. ಕೆಜಿಎಫ್ ಸಿನಿಮಾ ಬಂದ ಮೇಲೆ ಯಶ್ರನ್ನ ನೋಡಿದ ಅಭಿಮಾನಿ ಬಳಗ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಛತ್ರಪತಿ ಶಿವಾಜಿ ಕಥೆ ಆಯ್ಕೆ ಮಾಡಿಕೊಳ್ಳಬೇಕು ಅಂತ ಬೇಡಿಕೆ ಇಟ್ಟಿದ್ರು. 

ಅಷ್ಟೆ ಅಲ್ಲ ಯಶ್ ಬಿಟ್ಟಿದ್ದ ಗಡ್ಡ ನೋಡಿ ರಾಕಿಗೆ ಶಿವಾಜಿ ರೋಲ್ ಪಕ್ಕಾ ಸೂಟ್ ಆಗುತ್ತೆ ಅಂತ ಫೋಟೋ ಡಿಸೈನ್ ಮಾಡಿ ಹರಿ ಬಿಟ್ಟಿದ್ರು. ಅಲ್ಲಿಗೆ ಯಶ್ ಶಿವಾಜಿ ರೋಲ್ ಮಾಡ್ಲೇ ಬೇಕು ಅನ್ನೋ ಆಸೆ ಮತ್ತಷ್ಟು ಹೆಚ್ಚಾಗಿತ್ತು. ಸೋಲು ಗೆಲುವಿನ ಬಗ್ಗೆ ಚಿಂತೆ ಮಾಡಿದೇ ಬಾಲಿವುಡ್ ನಟ ಅಕ್ಷಯ್‌ಕುಮಾರ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಾರೆ. ಇದೀಗ ಛತ್ರಪತಿ ಶಿವಾಜಿ ಅವತಾರದಲ್ಲಿ ಖಿಲಾಡಿ ಅಕ್ಷಯ್ ಕುಮಾರ್ ಬಂದಿದ್ದಾರೆ. ಇತ್ತೀಚೆಗೆ ರಾಜ 'ಪೃಥ್ವಿರಾಜ್ ಚೌಹಾಣ್' ಪಾತ್ರದಲ್ಲಿ ನಟಿಸಿದ್ದ ಅಕ್ಷಯ್ ಕುಮಾರ್ ಈಗ ಮರಾಠ ಸಾಮ್ರಾಜ್ಯದ ದೊರೆ ಶಿವಾಜಿ ಆಗಿ ನಟಿಸುತ್ತಿದ್ದಾರೆ. 'ವೇಡಾತ್ಮರಾಠೆ ವೀರ್ ದೌಡಲೇ ಸಾಥ್' ಹೆಸರಿನಲ್ಲಿ ಈ ಮರಾಠಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಹೇಶ್ ಮಂಜ್ರೇಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

ಅಕ್ಷಯ್ ಕುಮಾರ್‌ರ ಶಿವಾಜಿ ಅವತಾರದ ಫಸ್ಟ್ ಲುಕ್ ಪೋಸ್ಟರ್ ಸಹ ರಿವೀಲ್ ಆಗಿದ್ದು ಶಿವಾಜಿ ಆಗಬೇಕಿದ್ದ ಯಶ್ ಜಾಗಕ್ಕೆ ಅಕ್ಷಯ್ ಕುಮಾರ್ ಬಂದಿದ್ದಾರೆ. ಛತ್ರಪತಿ ಶಿವಾಜಿ ಪಾತ್ರದಲ್ಲಿ ಈ ಹಿಂದೆಯೇ ಸಿನಿಮಾಗಳು ಬಂದಿವೆ. ಕಿರುತೆರೆಯಲ್ಲಿ ಧಾರವಾಹಿಗಳನ್ನ ನೋಡಿದ್ದೇವೆ. ಆದ್ರೆ ಕಮರ್ಷಿಯಲಿ ದೊಡ್ಡ ಸಿನಿಮಾ ಬಂದಿಲ್ಲ. ಆ ಜಾಗವನ್ನ ಯಶ್ ಫುಲ್ಫಿಲ್ ಮಾಡಬೇಕು ಅನ್ನೋ ಆಸೆ ರಾಕಿ ಅಭಿಮಾನಿಗಳಲ್ಲಿತ್ತು. ಆ ಆಸೆ ಈಡೇರೋ ಮೊದಲೇ ಈಗ ಕಮರ್ಷಿಯಲಿ ಬಿಗ್ ಹಿಟ್ ಆಗುವಂತದ ಶಿವಾಜಿ ಸಿನಿಮಾವನ್ನ ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಒಂದ್ ಕಡೆ ಯಶ್ ಮುಂದಿನ ಸಿನಿಮಾ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಇನ್ನೊಂದ್ ಕಡೆ ಶಿವಾಜಿ ಕತೆಯೂ ಮಿಸ್ ಆಯ್ತು. ಮತ್ತೊಂದ್ ಕಡೆ ನಿರ್ದೇಶಕ ನರ್ತನ್ ಡೈರೆಕ್ಷನ್‌ನಲ್ಲಿ ಸಿನಿಮಾ ಮಾಡೋಕೆ ಕಥೆ ಫಾರ್ಮ್ ಆಗಿಲ್ಲ. ಹೀಗಾಗಿ ಯಶ್ ಮುಂದಿನ ಸಿನಿಮಾದ ಕಥೆ ಆಯ್ಕೆ ಮಾತ್ರ ಕಾದ ಬಿಸಿ ತುಪ್ಪದಂತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment