Sep 2, 2020, 9:45 AM IST
ಬೆಂಗಳೂರು (ಸೆ. 01): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಚರ್ಚೆ ಶುರುವಾಗಿದೆ. ಇಂದು ಫಿಲ್ಮ್ ಚೇಂಬರ್‌ನಲ್ಲಿ ಮಹತ್ವದ ಮೀಟಿಂಗ್ ನಡೆಯಲಿದೆ. ನಟ ಶಿವರಾಜಕುಮಾರ್ ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಲಿದ್ದಾರೆ. ನಟ-ನಟಿಯರ ಮೇಲಿನ ಆರೋಪದ ಬಗ್ಗೆ ಚರ್ಚಿಸಲಾಗುತ್ತದೆ.
ಹಲವು ನಟ- ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು 15 ಜನರ ಲಿಸ್ಟ್ ಕೂಡಾ ರೆಡಿಯಾಗಿದೆ. ಸಿಸಿಬಿ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಫಿಲ್ಮ್ ಚೇಂಬರ್‌ನಲ್ಲಿಯೂ ಕೂಡಾ ಇಂದು ಮಹತ್ವದ ಸಭೆ ನಡೆಯಲಿದೆ. ನಟ- ನಟಿಯರ ಮೇಲೆ ಡ್ರಗ್ಸ್ ಆರೋಪ ಕೇಳಿ ಬರುತ್ತಿರುವುದು ಸ್ಯಾಂಡಲ್‌ವುಡ್‌ಗೆ ಕಳಂಕ ಬಂದ ಹಾಗೆ ಆಗಿದೆ.