Feb 25, 2023, 12:09 PM IST
'ಜೂಲಿಯೆಟ್' ಅಂದಾಕ್ಷಣ ಇದು ರೋಮಿಯೊ ಜೂಲಿಯೆಟ್‌ನಂಥ ಪ್ರೇಮಕಥೆಯಿರುವ ಸಿನಿಮಾ ಎಂದು ನೀವು ಅಂದುಕೊಂಡರೆ ಖಂಡಿತ ತಪ್ಪು. ಯಾಕಂದರೆ ಇದು ಪ್ರೀತಿಯಿಲ್ಲದ 'ಜೂಲಿಯೆಟ್ - 2'. ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ ಎಂಬುದನ್ನು 'ಜೂಲಿಯೆಟ್ - 2' ಸಿನಿಮಾ ಮೂಲಕ ಹೇಳ ಹೊರಟ್ಟಿದ್ದೇವೆ. ಹಾಡು ಹಾಗೂ ಟ್ರೇಲರ್ ಮೂಲಕ ನಮ್ಮ ಚಿತ್ರ ಜನರ ಮನ ತಲುಪಿದೆ. ಅಪ್ಪ - ಮಗಳ ನಡುವಿನ ಬಾಂಧವ್ಯದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿವೆ. ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಜೂಲಿಯೆಟ್ 2 ಸಿನಿಮಾವನ್ನು ವಿರಾಟ್ ಬಿ ಗೌಡ ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಪ್ರೇಮಂ ಪೂಜ್ಯ ಖ್ಯಾತಿಯ ಬೃಂದಾ ಆಚಾರ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ , ರಾಧೇಶ್ ಶೆಣೈ, ಶ್ರೀಕಾಂತ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೂಲಿಯೆಟ್ 2 ಸಿನಿಮಾದ ಹೆಚ್ಚಿನ ಭಾಗದ ಚಿತ್ರೀಕರಣ ದಟ್ಟ ಕಾಡಿನಲ್ಲಿ ಮತ್ತು ಕತ್ತಲಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿ ಬಳಿಯ ಪಶ್ಚಿಮ ಘಟ್ಟದ ಕಾಡಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment