Dec 29, 2022, 7:23 PM IST
ಅನಿಲ್ ಕುಂಬ್ಳೆ.. ಇಂಡಿಯನ್ ಕ್ರಿಕೆಟ್ ಜಗತ್ತಿನ ಮತ್ತೊಂದು ದಂತಕತೆ.. ಅನಿಲ್ ಕುಂಬ್ಳೆ ಕರ್ನಾಟಕದ ಸ್ಪೆಷಲ್ ಸ್ಪಿನ್ನರ್.. ಲೆಗ್‌ಬ್ರೇಕ್ ಸ್ಪಿನ್ ಬೌಲಿಂಗ್ನಿಂದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾಗಿದ್ದ ಅನಿಲ್ ಕುಂಬ್ಳೆಗೆ ಸಿನಿಮಾ ಕ್ರೇಜ್ ಸ್ವಲ್ಪ ಜಾಸ್ತಿನೆ. ಈ ಜಂಬೋ ಹಲವಾರು ಕನ್ನಡ ಸಿನಿಮಾ ಕಾರ್ಯಕ್ರಮಗಳಿಗೆ ಬಂದ ಉದಹಾರಣೆಗಳು ಸಾಕಷ್ಟಿವೆ. ಇದೀಗ ಅನಿಲ್ ಕುಂಬ್ಳೆ ಕರಾಟೆ ಕಿಂಗ್ ಶಂಕರ್ ನಾಗ್ ರ ಸೂಪರ್ ಡೂಪಸ್ ಗೀತಾ ಸಿನಿಮಾದ ಹಾಡು ಹಾಡಿದ್ದಾರೆ. ಅನಿಲ್ ಕುಂಬ್ಳೆ ಜಾಹಿರಾತೊಂದರ ಪ್ರಚಾರಕ್ಕೆ ಹೋಗಿದ್ರು. ಈ ಜಾಹೀರಾತಿನಲ್ಲಿ ಭಾರತೀಯ ಫುಟ್‌ಬಾಲ್ ಆಟಗಾರ ಸುನಿಲ್ ಛೆಟ್ರಿ, ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್, ಮಹಿಳಾ ಬಾಕ್ಸರ್ ಮೇರಿ ಕೋಮ್ ಕೂಡ ಇದ್ದಾರೆ.
ಆದ್ರೆ ಮೊದಲಿಗೆ ಬರೋ ಅನಿಲ್ ಕುಂಬ್ಳೆ 'ನೀವು ನನಗೆ 80ರ ದಶಕದ ಹೀರೋನಂತೆ ಕಾಸ್ಟ್ಯೂಮ್ ಹಾಕಲು ಹೇಳಿ ಬಾಲಿವುಡ್ ಹಾಡು ಹೇಳಲು ಹೇಳುತ್ತಿದ್ದೀರಿ. ಬಾಲಿವುಡ್ ಬೇಡ, 80ರ ದಶಕದ ಫೇಮಸ್ ಕನ್ನಡ ಹಾಡನ್ನು ಹಾಡುತ್ತೇನೆ' ಎಂದಿರೋ ಕುಂಬ್ಳೆ, ಕರಾಟೆ ಕಿಂಗ್ ಶಂಕರ್‌ನಾಗ್ ಅಭಿನಯದ 'ಗೀತಾ' ಚಿತ್ರದ ಸಂತೋಷಕ್ಕೆ ಹಾಡು ಸಂತೋಷಕ್ಕೆ. ಹಾಡನ್ನ ಹಾಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಅನಿಲ್ ಕಂಬ್ಳೆಗೆ ಕನ್ನಡ, ಕನ್ನಡ ಸಿನಿಮಾ ಮೇಲಿನ ಅಭಿಮಾನ ಜಾಸ್ತಿ ಇದೆ. ಅದರಲ್ಲೂ ಸ್ಯಾಂಡಲ್‌ವುಡ್ ಹೀರೋಗಳ ಜೊತೆ ಅವಿನಾಭಾವ ನಂಟು ಹೊಂದಿರೋ ಅನಿಲ್ ಕುಂಬ್ಳೆ ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ಹೆಚ್ಚು ಕಾಣಿಸಿಕೊಳ್ತಾರೆ. ಈ ಸಿನಿ ಮಂದಿಯ ಒಡನಾಟ ಕುಂಬ್ಳೆಗೆ ಕನ್ನಡ ಸಿನಿಮಾ ಮೇಲಿನ ಪ್ರೀತಿ ಹೆಚ್ಚಿಸಿದೆ. ಹೀಗಾಗೆ ಸಿನಿಮಾ ವಿಷಯ ಬಂದ್ರೆ ನಮ್ಮ ಜಂಬೋ ಮೊದಲು ಕನ್ನಡ ಸಿನಿಮಾ, ಹಾಡುಗಳ ಬಗ್ಗೆ ಹೆಚ್ಚು ಮಾತಾಡ್ತಾರೆ ಅನ್ನೋದಕ್ಕೆ ಇದೊಂದು ವೀಡಿಯೋ ಸಾಕ್ಷಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment