May 10, 2023, 2:39 PM IST
ಸ್ಯಾಂಡಲ್‌ವುಡ್‌ನ ಪದ್ಮಾವತಿ ನಟಿ ರಮ್ಯಾ ಅವರು ಇದೀಗ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಅದೇ ರೀತಿ ಚುನಾವಣಾ ಪ್ರಚಾರದಲ್ಲೂ ಬ್ಯುಸಿ ಆಗಿದ್ದಾರೆ. ವಿಶೇಷವಾಗಿ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಇದೆ. ಅದರಲ್ಲೂ ಶ್ವಾನಗಳಿಗೆ ಅವರು ಸಖತ್ ಪ್ರೀತಿ ತೋರಿಸುತ್ತಾರೆ. ಅದಕ್ಕೆ ಅನೇಕ ಘಟನೆಗಳು ಸಾಕ್ಷಿ ಆಗಿವೆ. ರಮ್ಯಾ ಮನೆಯಲ್ಲಿ ಅನೇಕ ನಾಯಿಗಳನ್ನು ಸಾಕಿದ್ದಾರೆ. ಅವರ ಮುದ್ದಿನ ನಾಯಿ 'ಚಾಂಪ್' ಕಾಣೆಯಾಗಿತ್ತು. ಬೇಸರದ ಸಂಗತಿ ಏನೆಂದರೆ ಕಾಣೆಯಾದ ಕೆಲವೇ ಗಂಟೆಗಳಲ್ಲಿ ಆ ನಾಯಿ ಸಾವನ್ನಪ್ಪಿದೆ. 16 ವರ್ಷದ ಪ್ರೀತಿಯ ಚಾಂಪ್ಗಾಗಿ ರಮ್ಯಾ ಕಣ್ಣೀರಿಟ್ಟಿದ್ದಾರೆ.
ಈ ವಿಷಯವನ್ನು ಸ್ವತಃ ರಮ್ಯಾ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. 'ಚಾಂಪ್ ಸತ್ತು ಹೋಗಿದ್ದಾನೆ. ಅವನಿಗಾಗಿ ಹುಡುಕಾಡಿದ ಎಲ್ಲರಿಗೂ ಧನ್ಯವಾಗಳು' ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮತ್ತು ಟ್ವಿಟರ್ನಲ್ಲಿ ರಮ್ಯಾ ಬರೆದುಕೊಂಡಿದ್ದಾರೆ. ಇನ್ನು ರಮ್ಯಾ ಸಿನಿಮಾ ವಿಚಾರಕ್ಕೆ ಬರುವುದಾರೆ ಸದ್ಯ ರಮ್ಯಾ ಧನಂಜಯ್ ಜೊತೆ ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ರಮ್ಯಾ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬರುತ್ತಿದ್ದಾರೆ. ರಮ್ಯಾ ಅವರನ್ನು ಬೆಳ್ಳಿ ಪರದೆ ಮೆಲೇ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಇನ್ನೂ ನಿರ್ಮಾಣಕ್ಕೂ ಇಳಿದಿರುವ ರಮ್ಯಾ ಆಪಲ್ ಬಾಕ್ಸ್ ಸಂಸ್ಥೆ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.