Dec 8, 2022, 11:47 AM IST
ಹುಡುಗರು ತನ್ನ ಮನದರಸಿಯನ್ನ ಪ್ರೀತಿಯಲ್ಲಿ ಬೀಳಿಸಿಕೊಂಡು ಮದುವೆ ಆಗೋದು ಅಷ್ಟು ಸುಲಭ ಅಲ್ಲ. ಮೊದ್ಲು ತಾನು ಇಷ್ಟ ಪಡೋ ಹುಡುಗಿ ಹಿನ್ನೆಲೆ ತಿಳ್ಕೊಬೇಕು. ಅವಳ ಇಷ್ಟ ಕಷ್ಟಗಳನ್ನ ಅರಿತಿರಬೇಕು. ಆ ನಂತ್ರ ಅವಳು ಇಷ್ಟ ಪಡೋ ರೀತಿಯೇ ಪ್ರಪೋಸ್ ಮಾಡಬೇಕು. ಅಬ್ಬಬ್ಬ ಹುಡುಗರ ಲವ್ ಪ್ರಪೋಸ್ ಗೋಳು ಯಾರಿಗೆ ಬೇಕು ಅಲ್ವಾ.? ಇದನ್ನೆಲ್ಲಾ ಚಾಲೆಂಜ್ ಆಗಿ ತಗೊಳ್ಳದೇ ಇದ್ರೆ ಹೆಂಗೆ.? ಇಷ್ಟದ ಹುಡುಗಿ ಸಂಗಾತಿ ಆಗಬೇಕು ಅಂದ್ರೆ ರಿಸ್ಕ್ ತಗೊಳ್ಳಲೇಬೇಕು. ಯುನೀಕ್ ಆಗಿ ಪ್ರಪೋಸ್ ಮಾಡಿ ಪ್ರೀತಿಯಲ್ಲಿ ಬೀಳಿಸಿಕೊಳ್ಳಲೇ ಬೇಕು. ಅದೇ ರೀತಿ ಡಿಫ್ರೆಂಟ್ ಆಗಿ ಪ್ರಪೋಸ್ ಮಾಡಿ ಇಪ್ರೆಸ್ ಮಾಡಿ ಹರಿಪ್ರಿಯಾರನ್ನ ತನ್ನ ಪ್ರೀತಿಯಲ್ಲಿ ಬೀಳಿಸ್ಕೊಂಡಿದ್ರಂತೆ ವಸಿಷ್ಠ ಸಿಂಹ. ಹರಿಪ್ರಿಯಾ ವಸಿಷ್ಠ ಸಿಂಹ ಸ್ಯಾಂಡಲ್‌ವುಡ್‌ನ ನವ ಪ್ರೇಮಿಗಳು.
ಇಬ್ಬರು ಸತಿ ಪತಿಗಳಾಗೋ ಕನಸು ಹೊತ್ತು ಮೊನ್ನೆಯಷ್ಟೆ ಇಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದ್ರೆ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದ್ದಾದ್ರು ಹೇಗೆ ಅನ್ನೋ ಕುತೂಹಲ ಇಬ್ಬರ ಫ್ಯಾನ್ಸ್ ಮಧ್ಯೆ ಪ್ರಶ್ನೆಯಾಗಿತ್ತು. ಅದಕ್ಕೀಗ ನೀರ್ದೋಸೆ ಚೆಲುವೆ ಉತ್ತರ ಕೊಟ್ಟಿದದಾರೆ. ಹರಿಪ್ರಿಯಾ- ವಸಿಷ್ಠ ಸಿಂಹನ ಮಧ್ಯೆ ಪ್ರೇಮಾಂಕುರಕ್ಕೆ ಕಾರಣ 'ಕ್ರಿಸ್ಟಲ್ ಅಂತೆ. ಆ ಕ್ರಿಸ್ಟಲ್ ಯಾರು ಗೊತ್ತಾ.? ಈ ವೀಡಿಯೋ ನೋಡಿ. ಒಂದು ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಮುದ್ದಾದ ನಾಯಿ ಮರಿಯನ್ನು ಹರಿಪ್ರಿಯಾಗೆ ಗಿಫ್ಟ್ ಆಗಿ ಕೊಟ್ಟಿದ್ರಂತೆ. ವಸಿಷ್ಠ ಸಿಂಹ ಕೊಟ್ಟ ಕ್ರಿಸ್ಟಲ್‌ನ ಎದೆಯ ಮೇಲೆ ಲವ್ ಸಿಂಬಲ್ ಹೊತ್ತು ತಂದಿದೆ. ಈ ನಾಯಿಮರಿ ಗಿಫ್ಟ್‌ನಿಂದ ಸ್ನೇಹ, ಪ್ರೀತಿಯಾಗಿ ಬೆಳೆದಿದ್ದು ಅಂತ ತಮ್ಮ ಲವ್ ಸೀಕ್ರೆಟ್ಅನ್ನ ಬಿಚ್ಚಿಟ್ಟಿದ್ದಾರೆ ಹರಿಪ್ರಿಯಾ. ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿರೋ ದಿನಾಂಕವನ್ನ ಅನೌನ್ಸ್ ಮಾಡಲಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment