ಜಿಮ್ಮ್‌ನಲ್ಲಿ ಧ್ರುವ ಕಸರತ್ತು...ಮತ್ತೆ ತೂಕ ಇಳಿಸಲು ಮುಂದಾದ ಆ್ಯಕ್ಷನ್ ಪ್ರಿನ್ಸ್..!

Apr 14, 2023, 5:14 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಅಭಿನಯದ ಕೆಡಿ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ.  ಕೆಡಿ ಸಿನಿಮಾಕ್ಕಾಗಿ ಮತ್ತೆ ಧ್ರುವ ಅದ್ದೂರಿ ಹುಡುಗನ ಲುಕ್‌ನಲ್ಲಿ ಮತ್ತೆ ಕಮ್‌ ಬ್ಯಾಕ್‌ ಮಾಡಲಿದ್ದಾರೆ. ಚಿತ್ರದ ಶೂಟಿಂಗ್ ಮಧ್ಯೆ ಆ್ಯಕ್ಷನ್ ಪ್ರಿನ್ಸ್ ವರ್ಕೌಟ್ ಎಂದೂ ಸ್ಟಾಪ್ ಆಗೋದಿಲ್ಲ. ಕೆಡಿ ಚಿತ್ರಕ್ಕೆ ಬೇಕಾಗೋ  ತಯಾರಿಯನ್ನ ಧ್ರುವ ಸರ್ಜಾ ಮಾಡ್ತಾನೇ ಇದ್ದಾರೆ. ಚಿತ್ರದ ಪಾತ್ರಕ್ಕಾಗಿಯೇ 18 ಕೆಜಿ ತೂಕ ಇಳಿಸಿದ್ದು, ಮತ್ತೆ ಇನ್ನಿಲ್ಲದಂತೆ ದೇಹದ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ತೂಕ ಇಳಿಸೋದರ ಜೊತೆ  ವರ್ಕೌಟ್ ಮುಂದುವರೆಸಿದ್ದು,  ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.